ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿನ ಬೈಪಾಸ್ ರಸ್ತೆಯಲ್ಲಿ ಖಾಸಗಿ ಶಾಲಾ ಬಸ್’ವೊಂದು ಪಲ್ಟಿಯಾಗಿದ್ದು, ಸ್ವಲ್ಪದಲ್ಲಿ ದೊಡ್ಡ ಅನಾಹುತವೊಂದು ತಪ್ಪಿದೆ.
ಬೈಪಾಸ್ ರಸ್ತೆಯ ಬಿಳಕಿ ಕ್ರಾಸ್ ಬಳಿಯಿರುವ ಪೆಟ್ರೋಲ್ ಬಂಕ್ ಬಳಿಯಲ್ಲಿ ಶಾಲಾ ವಾಹನ ಪಲ್ಟಿಯಾಗಿದೆ.

ಖಾಸಗಿ ಶಾಲಾ ವಾಹನ ಹಾಗೂ ಇನ್ನೊಂದು ಭಾರೀ ವಾಹನ ಒಂದರ ಹಿಂದೆ ಒಂದರAತೆ ಸಾಗುತ್ತಿದ್ದವು. ಈ ವೇಳೆ ಏಕಾಏಕಿ ಬಂದ ಕಾರೊಂದು ಎರಡೂ ವಾಹನಗಳ ನಡುವೆ ನುಗ್ಗಿದೆ.
ಏಕಾಏಕಿ ನುಗ್ಗಿ ಪರಿಣಾಮ ಗಾಬರಿಗೊಂಡ ಶಾಲಾ ಬಸ್ ಚಾಲಕ ಅಪಘಾತ ಆಗುವುದನ್ನು ತಪ್ಪಿಸಲು ವಾಹನವನ್ನು ಕೊಂಚ ಎಡಕ್ಕೆ ತಿರುಗಿಸಿದ್ದಾರೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ.


ಬಸ್ ಉರುಳಿಬಿದ್ದ ಪರಿಣಾಮ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಷಾತ್ ಯಾವುದೇ ಗಂಭೀರ ತೊಂದರೆಯಾಗಿಲ್ಲ.
ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಿಲ್ಲ. ಯಾರೂ ಗಾಬರಿಯಾಗುವ ಅವಶ್ಯತೆಯಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಉರುಳಿಬಿದ್ದ ಬಸ್ ಮುಂಭಾಗಕ್ಕೆ ಹಾನಿಯಾಗಿದೆ. ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ತತಕ್ಷಣ ಕ್ರಮಕೈಗೊಂಡ ಪೊಲೀಸರು, ಪಲ್ಟಿಯಾಗಿದ್ದ ವಾಹನವನ್ನು ತೆರವುಗೊಳಿಸಿ, ವಾಹನ ದಟ್ಟಣೆಯನ್ನು ಸರಿಪಡಿಸುವಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ.
ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post