ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಗರದಲ್ಲಿ ನಿನ್ನೆ ನಡೆದ ಡಬಲ್ ಮರ್ಡರ್ #DoubleMurder ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಜೈಭೀಮ್ ನಗರದ ಮಂಜುನಾಥ್ ಸೈಲೆಂಟ್ ಶಶಿ(29), ಭರತ್ ಸುಂಡು(32), ಸಂಜಯ್ ಕುಳ್ಳಿ(24), ಸುರೇಶ್ ಸೂರಿ(27) ಹಾಗೂ ವೆಂಕಟೇಶ್ ಕೆಂಚ(28) ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ?
ಜೈಭೀಮ್ ನಗರದಲ್ಲಿ ನಿನ್ನೆ ಇಬ್ಬರನ್ನು ಭೀಕರವಾಗಿ ಹತ್ಯೆ #Murder ಮಾಡಲಾಗಿತ್ತು. ಪರಸ್ಪರ ಪ್ರೀತಿಸಿದ್ದ ಯುವಕ ಹಾಗೂ ಯುವತಿಯ ಪರವಾಗಿ ಮಧ್ಯ ಪ್ರವೇಶಿಸಿ ಬೆಂಬಲ ನೀಡಲು ಪ್ರಯತ್ನಿಸಿದರು ಎಂಬ ಕಾರಣಕ್ಕಾಗಿ ಇಬ್ಬರನ್ನು ನಿನ್ನೆ ಮಾರಣಾಂತಿಕಾಗಿ ಹತ್ಯೆ ಮಾಡಲಾಗಿತ್ತು. ಅಗ್ನಿವೀರ ಕನಸು ಕಂಡಿದ್ದ ಕಿರಣ್ ಹಾಗೂ ಮಂಜುನಾಥ್ ಹತ್ಯೆಯಾದವರು.
ಘಟನೆ ಸಂಬಂಧ ವಾಟ್ಸಪ್ ಮೂಲಕ ಸಂದೇಶ ನೀಡಿರುವ ಎಸ್’ಪಿ ಮಿಥುನ್ ಕುಮಾರ್, ಘಟನೆಯ ಬಗ್ಗೆ ಮಾಹಿತಿ ಒದಗಿಸಿದ್ದಾರೆ. ಅದರ ಪ್ರಕಾರ, ಕಳೆದ ಎರಡು ದಿನಗಳ ಹಿಂದೆ ಇಲ್ಲಿನ ಯುವಕ-ಯುವತಿ ನಾಪತ್ತೆಯಾಗಿದ್ದರು. ಪರಸ್ಪರ ಪ್ರೀತಿಸಿದ್ದ ಅವರು ಓಡಿ ಹೋಗಿದ್ದು, ನಿನ್ನೆ ಸಂಜೆ ವೇಳೆ ಹಳೇ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಇವರಿಬ್ಬರನ್ನು ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದರು ಎಂದಿದ್ದರೆ.
ಅಲ್ಲದೇ, ಅದೇ ಸಂದರ್ಭದಲ್ಲಿ ಪಂಚಾಯ್ತಿ ಮಾಡಲು ಹಲವಾರು ಮಂದಿ ಸೇರಿದ್ದರು. ಇನ್ನೂ ಯುವತಿ ತಾನು ಯುವಕನ ಜೊತೆಯಲ್ಲೇ ಹೋಗುವುದಾಗಿ ಕುಟುಂಬಸ್ಥರ ಎದುರು ಸ್ಪಷ್ಟಪಡಿಸಿದ್ದಳು. ಈ ಕಾರಣಕ್ಕೆ ಗಲಾಟೆ ನಡೆದಿದೆ. ಗಲಾಟೆಯ ನಡುವೆ ಸಿಟ್ಟಾದ ಯುವತಿಯ ಸಹೋದರ ಮತ್ತು ಆತನ ಸ್ನೇಹಿತರು, ಯುವಕನ ಪರವಾಗಿದ್ದಾರೆ. ಆತನಿಗೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಬ್ಬರಿಗೆ ಇರಿದಿದ್ದಾರೆ. 25 ವರ್ಷದ ಕಿರಣ್ ಮತ್ತು ಈ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ 65 ವರ್ಷದ ಮಂಜುನಾಥ್ ಎಂಬಿಬ್ಬರು ಇರಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















