ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ಪುತ್ರ ಬಸವೇಶ್ ಅವರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಎಫ್’ಐಆರ್ ದಾಖಲಾಗಿದ್ದು, ಪ್ರಕರಣದ ತನಿಖೆ ನಡೆದಿದೆ.
ಶಾಸಕರ ಆಪ್ತರೊಬ್ಬರು ನೀಡಿರುವ ದೂರಿನ ಆಧಾರದಲ್ಲಿ ಹಳೇ ನಗರ ಠಾಣೆಯಲ್ಲಿ ಎಫ್’ಐಆರ್ ದಾಖಲಾಗಿದ್ದು, ತನಿಖೆ ನಡೆದಿದೆ.
ಡಿಚ್ಚಿ ಮುಬಾರಕ್, ಟಿಪ್ಪು ಮತ್ತು ಇತರೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
Also read: ಆ.22: ರೇಡಿಯೋ ಶಿವಮೊಗ್ಗದಲ್ಲಿ ಜನತಾ ಜಾಗೃತಿ ಬಾನುಲಿ ಸರಣಿ
ಡೀಲ್ ಕೊಟ್ಟಿದ್ದು ಯಾರು?
ಮುಬಾರಕ್ ಅಲಿಯಾಸ್ ಡಿಚ್ಚಿ ಮುಬಾರಕ್ ಎಂಬಾತ ಜೈಲಿನಿಂದ ಭದ್ರಾವತಿಯ ಮುಬಾರಕ್ ಎಂಬಾತನಿಗೆ ಕರೆ ಮಾಡಿ, ಭದ್ರಾವತಿ ಗಾಂಧಿ ಸರ್ಕಲ್ ಬಳಿ ಬಸಣ್ಣನನ್ನು ಹತ್ಯೆ ಮಾಡುವಂತೆ ಟಿಪ್ಪು ಮತ್ತು ಇತರೆ ನಾಲ್ವರನ್ನು ಕಳುಹಿಸುತ್ತಿರುವುದಾಗಿ ತಿಳಿಸಿದ್ದ ಎಂದು ಆರೋಪಿಸಲಾಗಿದೆ. ಈ ಸಂಬಂಧ ಗುತ್ತಿಗೆದಾರ ಸುನಿಲ್ ದೂರು ನೀಡಿದ್ದಾರೆ.
ಮುಬ್ಬು ಹೇಳಿದಂತೆ ಜೈಲಿನಿಂದಲೇ ಡಿಚ್ಚಿ ಮುಬಾರಕ್ ಬಸವೇಶ್ ಹತ್ಯೆಗೆ ಸ್ಕೆಚ್ ಹಾಕಿ ಸೀಗೆಬಾಗಿ ನಿವಾಸಿ ಟಿಪ್ಪುಗೆ ಡೀಲ್ ಕೊಟ್ಟಿದ್ದಾನೆ. ಗಾಂಧಿ ಸರ್ಕಲ್’ನಲ್ಲಿ ಬಸವೇಶ್ ಅವರನ್ನ ಹೊಡೆದು ಹಾಕಿ ಎಂದು ಟಿಪ್ಪು ಅಂಡ್ ಟೀಂಗೆ ಹೇಳಿದ್ದ ಎಂದು ಮುಬ್ಬು ತಿಳಿಸಿದ್ದಾಗಿ ದೂರು ದಾಖಲಾಗಿದೆ.
ಇಷ್ಟೆ ಅಲ್ಲದೆ ಕಳೇದ 17 ತಾರೀಖು ರಂಗಪ್ಪ ಸರ್ಕಲ್ ಬಳಿ ಸಿಕ್ಕ ಟಿಪ್ಪು ಬಾರ್’ವೊಂದರಲ್ಲಿ ಕುಳಿತು ಡಿಚ್ಚಿ ಮುಬಾರಕ್ ಡೀಲ್ ಕೊಟ್ಟಿದ್ದು, ಅದರಂತೆ ಚಾಕು ತಂದಿದ್ದೇನೆ ಎಂದು ಮುಬ್ಬುಗೆ ತೋರಿಸಿರುವ ಬಗ್ಗೆ ಎಫ್’ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆ ಆಧಾರದಲ್ಲಿ ವಿವಿಧ ಸೆಕ್ಷನ್’ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post