ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಸೈಟ್ ಖರೀದಿದಾರನ ಖಾತೆ ಬದಲಾವಣೆಗೆ ಹಣದ ಬೇಡಿಕೆ ಇಟ್ಟಿದ್ದ ನಗರಸಭೆ ಗುಮಾಸ್ತ ಕುಮಾರ್ ಇಂದು ಎಸಿಬಿ ಬಲೆಗೆ ಬಿದ್ದಿದ್ದಾನೆ.
ಕಂದಾಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕುಮಾರ್ ಎಂಬುವರು ಬೊಮ್ಮನಕಟ್ಟೆಯಲ್ಲಿ ಲೇಔಟ್ ನಲ್ಲಿ ಸೈಟ್ ಖರೀದಿದಾರನ ಖಾತೆ ಬದಲಾವಣೆಗೆ 5 ಸಾವಿರ ರೂ.ಹಣದ ಬೇಡಿಕೆ ಇಟ್ಟಿದ್ದನು.
ಇಂದು ಹಣ ಪಡೆಯವಾಗ ಎಸಿಬಿ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ. ಡಿವೈಎಸ್ಪಿ ಲೋಕೇಶ್, ತನಿಖಾ ಠಾಣಾಧಿಕಾರಿಗಳಾದ ವೀರೇಂದ್ರ, ತಿಪ್ಪೇಸ್ವಾಮಿ, ಸಿಬ್ಬಂದಿಗಳಾದ ವಸಂತ್, ನಾಗರಾಜ್, ರಘು, ಸುರೇಂದ್ರ, ಯೋಗೇಶ್ ಮತ್ತು ಶ್ರೀನಿವಾಸ್ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
Get In Touch With Us info@kalpa.news Whatsapp: 9481252093






Discussion about this post