ಭದ್ರಾವತಿ: ನಗರದ ರೋಟರಿ ಸಮುದಾಯ ಭನವದಲ್ಲಿ ರೋಟರಿ ಕ್ಲಬ್ ಮತ್ತು ಆನ್‌ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷ ಡಿ.ಕೆ.ರಾಘವೇಂದ್ರ ಅಧ್ಯಕ್ಷತೆ ವಹಿಸಿ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಎಂ.ಕೆ.ರೇವಣಪ್ಪ ಸೇರಿದಂತೆ ಗಣನೀಯ ಸೇವೆ ಸಲ್ಲಿಸಿದ ಬೇಲಿಮಲ್ಲೂರು ಎಂ.ನಾಗಪ್ಪ, ಎಂ.ಚಂದ್ರಮೋಹನ್, ಶಶಿರೇಖಾ, ಎಸ್.ಜಯಶ್ರೀ 5 ಮಂದಿ ಶಿಕ್ಷಕರನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ರೋಟರಿ ವಿಭಾಗೀಯ ಲೆಪ್ಟನೆಂಟ್ ಅಮಿತ್ ಕುಮಾರ್ ಜೈನ್, ಆನ್‌ಸ್ ಅಧ್ಯಕ್ಷೆ ಕುಸುಮಾ ಸೇರಿದಂತೆ ರೋಟರಿ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post