ಭದ್ರಾವತಿ: ಪುಸ್ತಕಗಳ ನೀತಿಯಿಂದ ಮಕ್ಕಳಿಗೆ ಸಾಹಿತ್ಯದ ಹೆಚ್ಚಾಗಲಿದ್ದು ಅಕ್ಷರದ ಜ್ಞಾನದ ಬೀಜ ಬಿತ್ತುವ ಕಾರ್ಯವಾಗಬೇಕಿದೆ ಎಂದು ಜಿಲ್ಲಾ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ್ ಅಭಿಪ್ರಾಯ ಪಟ್ಟರು.
ಇಂದು ಹೊಸಮನೆ ಅಶ್ವಥ್ ನಗರದ ಬಾಪೂಜಿ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕಾವ್ಯ, ಪ್ರಬಂಧ, ಕಥಾ ರಚನಾ ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಒತ್ತಡದಲ್ಲಿ ಶಿಕ್ಷಕರು ತಿಳಿಸಲಾಗದ ವಿಚಾರಗಳನ್ನು ಸಾಹಿತ್ಯ, ಕಾವ್ಯಗಳಲ್ಲಿ ಮೂಡಿಬರಲಿವೆ. ಕಲಿಕೆ ಮುಂದಾದ ವಿದ್ಯಾರ್ಥಿಗಳು ಶಿಕ್ಷಕರನ್ನು ಪ್ರಶ್ನಿಸುವಂತಾಗಬೇಕು. ಶಿಕ್ಷಕರೊಂದಿಗೆ ಪರಸ್ಪರ ಪ್ರಶ್ನಿಸುವುದರಿಂದ ಜ್ಞಾನ ಸಂಪಾದನೆ ಹೆಚ್ಚಾಗಲಿದೆ. ವಿದ್ಯಾರ್ಥಿ ಜೀವನದಲ್ಲಿ ಆದಷ್ಟು ಮೊಬೈಲ್‌ಗಳಿಂದ ದೂರವಿದ್ದು ಕಲಿಕೆಗೆ ಹೆಚ್ಚು ಒತ್ತು ನೀಡುವಂತಾಗಬೇಕು. ತಾವು ಪಡೆಯುವ ಅಂಕಗಳನ್ನು ನೋಡಿ ಅವಕಾಶ ಲಭಿಸಲು ಸಾಧ್ಯವಿಲ್ಲ. ತಮ್ಮಲ್ಲಿರುವ ಕೌಶಲ್ಯತೆ ಹೊರಹಾಕಿದಾಗ ಮಾತ್ರ ಅವಕಾಶ ದೊರೆಯಲಿದೆ ಎಂದರು.
ವೇದಿಕೆ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲೆಯ ಮುಖ್ಯೋಪದ್ಯಾಯ ವಸಂತಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಮುಖ್ಯ ಶಿಕ್ಷಕ ಮಂಜಪ್ಪ, ಬಿಆರ್‌ಪಿ ಶಾಲೆಯ ಡಾ.ತಂಬೂಳಿ, ಸವಿತಾ, ಶಾಲಾ ಆಡಳಿತ ಮಂಡಳಿಯ ಯಶೋದಮ್ಮ ವಡಿವೇಲು, ಜಯಲಕ್ಷ್ಮೀ, ಕೋಡ್ಲಯಜ್ಞಯ್ಯ, ಕಾಂತಪ್ಪ ಮುಂತಾದವರಿದ್ದರು. ಇದೇ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗು ವೇದಿಕೆಯ ಮಾಧ್ಯಮ ಸಂಚಾಲಕ ಬಸವರಾಜ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post