ಶಿವಮೊಗ್ಗ: ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳು ನೀಡಿರುವ ಭಾರತ್ ಬಂದ್’ಗೆ ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ ದೊರೆತಿದ್ದು, ಜನಜೀವನಕ್ಕೆ ಯಾವುದೇ ತೊಂದರೆಯಾಗಿಲ್ಲ.
ನಗರದಲ್ಲಿ ಎಂದಿನಂತೆ ಆಟೋ, ಖಾಸಗಿ ಬಸ್, ಲಾರಿ ಸಂಚಾರ ಆರಂಭಗೊಂಡಿದೆ. ಪ್ರತಿದಿನದಂತೆ ಅಂಗಡಿ, ಮುಂಗಟ್ಟುಗಳು ಓಪನ್ ಆಗಿದ್ದು, ಹೂವಿನ ಅಂಗಡಿಗಳು, ತಿಂಡಿ ಗಾಡಿಯ ವ್ಯಾಪಾರಿಗಳು ಎಂದಿನಂತೆ ವ್ಯಾಪಾರ ನಡೆಸುತ್ತಿದ್ದಾರೆ.

ರಾಜ್ಯ ರಸ್ತೆ ಸಾರಿಗೆ ಬಸ್ ಸಂಚಾರ ಹೊರತು ಪಡಿಸಿ ಉಳಿದಂತೆ, ಎಲ್ಲಾ ಖಾಸಗಿ ಬಸ್ ಸಂಚಾರ ಆರಂಭಗೊಂಡಿದೆ. ಬಂದ್ ಕೆಎಸ್‌ಆರ್‌ಟಿಸಿ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಬಸ್’ಗಳು ರಸ್ತೆಗಿಳಿದಿಲ್ಲ. ಉಳಿದಂತೆ ಜನಜೀವನ ಎಂದಿನಂತಿದ್ದು, ಒಟ್ಟಾರೆಯಾಗಿ ನಗರದಲ್ಲಿ ಬಂದ್ ವಿಫಲವಾಗಿದೆ.

















