ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಎಂಬ ಕುಂಟು ನೆಪ ಹೇಳಿ, ಕಮ್ಯೂನಿಸ್ಟರು ಇಂದು ಕರೆ ನೀಡಿರುವ ಭಾರತ್ ಬಂದ್ ಅಡ್ಡಡ್ಡ ಮಲಗಿದ ಬೆನ್ನಲ್ಲೇ, ಬಂದ್ ಮಾಡುವವರಿಗೆ ಸವಾಲು ಹಾಕಿರುವ ಮಂಗಳೂರು ಯುವಕನೊಬ್ಬನ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸಾಮಾಜಿಕ ಕಾರ್ಯಕರ್ತ ಸೌರಜ್ ಮಂಗಳೂರು ಅವರ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಇಂತಹುದ್ದೊಂದು ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಭಾರತ್ ಬಂದ್ ಮಾಡುವವರ ವಿರುದ್ಧ ಕಿಡಿ ಕಾರಿರುವ ಸೌರಜ್, ಅದೆಷ್ಟು ಬಂದ್’ಗಳು. ಶಾಲಾ ಕಾಲೇಜು, ಸರಕಾರಿ ಆಫೀಸ್’ಗಳಿಗೆ ಅನಾವಶ್ಯಕ ರಜೆಗಳು… ದಿನಗೂಲಿ ನೌಕರರಿಗೆ ಪರದಾಟಗಳು… ಎಂದಿದ್ದಾರೆ.
ವೀಡಿಯೋ ನೋಡಿ:
ಸಾಮಾಜಿಕ ಕಳಕಳಿಯ ಆಕ್ರೋಶದಿಂದ ಮಾತನಾಡಿರುವ ಸೌರಜ್, ಬಂದ್ ಮಾಡುವವರಿಗೆ ನನ್ನದೊಂದು ಸಲಹೆ. ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿಯವರು ಪ್ರತಿಭಟಿಸಲು ಒಂದು ಉತ್ತಮ ಮಾರ್ಗ ಹೇಳಿ ಕೊಟ್ಟಿದ್ದಾರೆ… ಅದುವೇ ಉಪವಾಸ ಸತ್ಯಾಗ್ರಹ. ಬಂದ್’ಗೆ ಕರೆಕೊಡುವ ನಾಯಕರು, ಹಿಂಬಾಲಕರು ಅಮರಣಾಂತ ಉಪವಾಸ ಮಾಡಿದರೆ ಬೇಡಿಕೆ ಈಡೇರಿಸಲು ಬಂದ್’ಗಿಂತ ಅತೀ ಉತ್ತಮ ಮಾರ್ಗ. ಸಾರ್ವಜನಿಕರಿಗೂ ಹಾನಿಯಿಲ್ಲ..
ಏನಂತೀರಿ!?
ನಮ್ಮ ನಾಯಕರುಗಳಿಗೆ ಆ #ಧಮ್_ಇದೆಯಾ!?
ಎಂಬ ಚಾಲೆಂಜ್ ಹಾಕಿರುವ ವೀಡಿಯೋ ಭಾರೀ ವೈರಲ್ ಆಗಿದೆ.
Discussion about this post