ರೋರಿಂಗ್ ಸ್ಟಾರ್ ಶ್ರೀಮುರುಳಿ ಹಾಗೂ ಶ್ರೀಲೀಲಾ ಅಭಿನಯದ ಭರಾಟೆ ಚಿತ್ರದ ಫೋಟೋ ಶೂಟ್ ರಾಜಸ್ಥಾನದಲ್ಲಿ ಭರ್ಜರಿಯಾಗಿ ನಡೆದಿದೆ.
ಈಗಾಗಲೇ ಚಿತ್ರ ಫಸ್ಟ್ ಲುಕ್ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸುವ ಜೊತೆಯಲ್ಲಿ ಗಾಂಧಿನಗರದಲ್ಲಿ ಹೊಸ ಸಂಚಲನ ಸೃಷ್ಠಿಸಿದೆ.
ಆ.15ರಂದು ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಲಿದ್ದು, ಆ.20ರಿಂದ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ. ಚಿತ್ರೀಕರಣದ ಬಹುತೇಕ ರಾಜಾಸ್ಥಾನದಲ್ಲೇ ನಡೆಯಲಿದ್ದು, ಇದಕ್ಕಾಗಿ ಎಲ್ಲ ತಯಾರಿಗಳು ನಡೆದಿವೆ.
ಭರಾಟೆಯಲ್ಲಿ ಮುರುಳಿ ವಿಭಿನ್ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಕೌಟುಂಬಿಕ ಕತೆಯನ್ನು ಚಿತ್ರ ಹೊಂದಿರುವ, ಮನೋರಂಜನಾತ್ಮಕ ಚಿತ್ರ ಇದಾಗಿದೆ.
ಅರ್ಜುನ್ ಜನ್ಯ ಸಂಗೀತವಿರುವ ಈ ಚಿತ್ರಕ್ಕೆ ಕೆಜಿಎಫ್ ಚಿತ್ರದ ಛಾಯಾಗ್ರಾಹಕ ಭುವನ ಗೌಡ ತಮ್ಮ ಕ್ಯಾಮೆರಾ ಕೈಚಳಕ ತೋರಿಸಲಿದ್ದಾರೆ. ಒಂದು ದೊಡ್ಡ ತಂಡವನ್ನೇ ಕಟ್ಟಿಕೊಂಡು ಹೊರಟಿರುವ ನಿರ್ದೇಶಕ ಚೇತನ್ ಕುಮಾರ್ ಈ ಬಾರಿ ಹ್ಯಾಟ್ರಿಕ್ ಬಾರಿಸುವ ಜೊತೆಗೆ ಮನೋರಂಜನೆಯ ಮಹಾಪೂರವನ್ನೇ ಈ ಭರಾಟೆ ಚಿತ್ರದ ಮೂಲಕ ನೀಡಲು ಸಿದ್ದರಾಗಿದ್ದಾರೆ.
ಚೇತನ್ ಕುಮಾರ್ ಈಗಾಗಲೇ 2012ರಲ್ಲಿ ವರದನಾಯಕ ಚಿತ್ರದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೂಲಕ ಬೈಟೆ ಬೈಟೆ ಚಾರ್ ಬಾತ್ ಕರೆದಂಗೆ ಎಂಬ ಹಾಡನ್ನು ಬರಿಯೋ ಮೂಲಕ ಚಿತ್ರಸಾಹಿತಿ ಆಗಿ ಗುರುತಿಸಿಕೊಂಡರು. ಆನಂತರ ಬಹದ್ದೂರ್ ಚಿತ್ರದ ಮೂಲಕ ಯಶಸ್ವಿ ನಿರ್ದೇಶಕ ಎನಿಸಿಕೊಂಡವರು. ಈಗ ತಮ್ಮ ಮೂರನೆಯ ಸಾಹಸಕ್ಕೆ ಕೈ ಹಾಕಿದ್ದಾರೆ.
Discussion about this post