ಕಲ್ಪ ಮೀಡಿಯಾ ಹೌಸ್
ಭೂಪಾಲ್ (ಮಧ್ಯಪ್ರದೇಶ): 6ನೆಯ ತರಗತಿ ಓದುತ್ತಿರುವ 13 ವರ್ಷದ ಬಾಲಕನೊಬ್ಬ ತನ್ನ ತಾಯಿಗೆ ಡೆತ್‌ನೋಟ್ ಬರೆದಿಟ್ಟು, ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಚತಾರ್‌ಪುರ್‌ನಲ್ಲಿ ಇಂದು ನಡೆದಿದೆ.
ಆತ್ಮಹತ್ಯೆಗೆ ಶರಣಾದ ಬಾಲಕನನ್ನು ಕೃಷ್ಣ ಎಂದು ಗುರುತಿಸಲಾಗಿದ್ದು, ಆನ್‌ಲೈನ್ ಗೇಮ್‌ಗೆ ಅಡಿಕ್ಟ್ ಆಗಿದ್ದ ಈತ ಇದರಲ್ಲಿ 40,000 ರೂ.ಗಳನ್ನು ಪೋಷಕರಿಗೆ ತಿಳಿಯದಂತೆ ಕಳೆದಿದ್ದ ಎಂದು ಹೇಳಲಾಗಿದೆ.
ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿರುವ ಬಾಲಕ ನನ್ನನ್ನು ಕ್ಷಮಿಸಿ ಅಮ್ಮ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಆನ್‌ಲೈನ್ ಗೇಮ್‌ನಲ್ಲಿ 40,000ರೂ.ಗಳನ್ನು ನಾನು ಕಳೆದಿದ್ದೇನೆ. ನಿಮ್ಮ ಯುಪಿಐ ಖಾತೆಯಿಂದ ನಾನು 40,000ರೂ. ತೆಗೆದಿದ್ದು, ಫ್ರೀಫೈರ್ ಗೇಮ್‌ನಲ್ಲಿ ಈ ಹಣವನ್ನು ಕಳೆದಿದ್ದೇನೆ. ನಾನು ಮಾಡಿದ ತಪ್ಪಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿಟ್ಟು, ನೇಣು ಬಿಗಿದುಕೊಂಡಿದ್ದಾನೆ.
ಘಟನಾ ಸ್ಥಳಕ್ಕೆ ಸ್ಥಳೀಯ ಡಿಎಸ್‌ಪಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post