ಕಲ್ಪ ಮೀಡಿಯಾ ಹೌಸ್ | ಭುವನೇಶ್ವರ್ |
ಒಡಿಶಾದ ಪುರಿ ಜಗನ್ನಾಥ ದೇವಾಲಯದ #Odisha Puri Jagannatha Temple ಚಂದನ್ ಜಾತ್ರೆಯ ವೇಳೆ ಪಟಾಕಿ ರಾಶಿ ಸ್ಪೋಟಗೊಂಡಿದ್ದು, 15 ಮಂದಿ ಗಾಯಗೊಂಡು ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದಬಂದಿದೆ.
ಜಾತ್ರೆ ಅಂಗವಾಗಿ ಬಹಳಷ್ಟು ಪಟಾಕಿಯನ್ನು ಸಂಗ್ರಹಿಸಿ ಇರಿಸಲಾಗಿತ್ತು. ಜಾತ್ರೆ ನಡೆಯುವ ವೇಳೆ ಭಕ್ತರು ಪಟಾಕಿ ಸಿಡಿಸುತ್ತಿದ್ದರು. ಇದರಿಂದ ಹಾರಿದ ಕಿಡಿ ಸಂಗ್ರಹಿಸಿದ್ದ ಪಟಾಕಿಗೆ ತಗುಲಿದ್ದು, ಇದರಿಂದಾಗಿ ಸ್ಪೋಟ ಸಂಭವಿಸಿದೆ ಎಂದು ವರದಿಯಾಗಿದೆ.
ಸ್ಪೋಟದ ವೇಳೆ ನೂರಾರು ಭಕ್ತರು ಜಲಧಾರೆ ನರೇಂದ್ರ ಪುಷ್ಕರಿಣಿಯ ದಡದಲ್ಲಿ ನಿಂತಿದ್ದರು. ಪಟಾಕಿ ರಾಶಿಗೆ ಬೆಂಕಿ ತಗಲುತ್ತಿದ್ದಂತೆ ಕೆಲವರು ಜೀವ ಉಳಿಸಿಕೊಳ್ಳಲು ನದಿಗೆ ಜಿಗಿದಿದ್ದಾರೆ.
Also read: ಅಯೋಧ್ಯೆ ರಾಮಮಂದಿರ ಸ್ಪೋಟ ಬೆದರಿಕೆ | ಅಪ್ರಾಪ್ತ ಬಂಧನ | ಆತ ಬುದ್ಧಿಮಾಂದ್ಯನಂತೆ!
ಘಟನೆಯಲ್ಲಿ ಗಾಯಗೊಂಡವರದಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಘಟನೆ ಬಗ್ಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗಾಯಾಳುಗಳ ಚಿಕಿತ್ಸೆಯ ವೆಚ್ಚವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಲಾಗುವುದು ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















