ಕಲ್ಪ ಮೀಡಿಯಾ ಹೌಸ್ | ಭುವನೇಶ್ವರ್ |
ಮೈಕ್ರೋ ಕ್ಯಾಮೆರಾ ಅವಳವಡಿಸಿದ್ದ ಪಾರಿವಾಳವನ್ನು ಒಡಿಶಾದ ಜಗತ್‍ಸಿಂಗ್‍ಪುರ ಜಿಲ್ಲೆಯ ಪರದೀಪ್ ಕರಾವಳಿಯಲ್ಲಿ ಸೆರೆ ಹಿಡಿದಿದ್ದು, ಬೇಹುಗಾರಿಕೆಗೆ ಬಳಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಒಡಿಶಾದ ಜಗತ್‍ಸಿಂಗ್‍ಪುರ ಜಿಲ್ಲೆಯ ಪರದೀಪ್ ಕರಾವಳಿಯಲ್ಲಿ ಮೀನುಗಾರರು ಕೆಲವು ದಿನಗಳ ಹಿಂದೆ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿಯ ಮೇಲೆ ಕುಳಿತಿದ್ದ ಪಾರವಾಳವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮೈಕ್ರೋ ಕ್ಯಾಮೆರಾ ಅಳವಡಿಸಿರುವುದು ಕಂಡುಬಂದ ಹಿನ್ನೆಲೆ ತಕ್ಷಣ ಎಚ್ಚೆತ್ತ ಮೀನುಗಾರರು ಪಾರಿವಾಳವನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದಾದ ಬಳಿಕ ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಈ ಬಗ್ಗೆ ಜಗತ್‍ಸಿಂಗ್‍ಪುರ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಪಿಆರ್ ಮಾತನಾಡಿ, ಪಶುವೈದ್ಯರು ಪಾರಿವಾಳವನ್ನು ಪರೀಕ್ಷಿಸುತ್ತಿದ್ದಾರೆ. ಅದರ ಕಾಲುಗಳಿಗೆ ಜೋಡಿಸಲಾದ ಸಾಧನಗಳನ್ನು ಪರೀಕ್ಷಿಸಲು ರಾಜ್ಯ ವಿಧಿವಿಜ್ಞಾನ ಪ್ರಯೋಗಾಯಲಯದ ಸಹಾಯವನ್ನು ಪಡೆಯುತ್ತೇವೆ ಎಂದು ತಿಳಿಸಿದರು.
Also read: ಹಿಟ್ ಸಿನಿಮಾಗಳ ನಿರ್ದೇಶಕ ರಾಯಚೂರು ಚುನಾವಣಾ ರಾಯಭಾರಿ: ಯಾರು ಗೊತ್ತಾ? ಇಲ್ಲಿದೆ ಮಾಹಿತಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post