ಕಲ್ಪ ಮೀಡಿಯಾ ಹೌಸ್ | ಬೀದರ್ |
ಸಮಯಕ್ಕೆ ಮಳೆಬಾರದೆ ಬೆಳೆ ಹಾನಿಯಿಂದ ರೈತರು ಮೊದಲೇ ಹೈರಾಣಾಗಿ ಹೋಗಿದ್ದಾರೆ. ಇಂತಹದರಲ್ಲಿ ಉತಮವಾಗಿ ಬೆಳೆದ ಕಬ್ಬಿನ ಬೆಳೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿದ್ದು ರೈತರ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಸರ್ಕಾರ ಕೂಡಲೇ ಸಂತ್ರಸ್ತ ರೈತನಿಗೆ ಪರಿಹಾರ ನೀಡಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ರಂಜೋಳ ಖೇಣಿ ಗ್ರಾಮದ ರೈತ ಪ್ರವಿಣ ಅವರ ಕಬ್ಬಿನ ಬೆಳೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಕ್ಷಣ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿ ರೈತರಿಗೆ ಪರಿಹಾರ ದೊರೆಯುವಂತೆ ಮಾಡಬೇಕು ಎಂದು ಸೂಚಿಸಿದರು ಮತ್ತು ಅಲ್ಲಲ್ಲಿ ಬಾಗಿದ ಕಂಬಗಳು ಸರಿಪಡಿಸಲು ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿ ಮಾತನಾಡಿದರು.
ಉತ್ತಮವಾಗಿ ಬೆಳೆದ ಕಬ್ಬು ಇದೀಗ ಸುಟ್ಟು ಭಸ್ಮವಾಗಿದ್ದು, ನಮ್ಮ ಬದುಕಿಗೆ ಕತ್ತಲೆ ಆವರಿಸಿದೆ ನಮಗೆ ಪರಿಹಾರ ನೀಡಬೇಕು ಎಂದು ರೈತ ಶಾಸಕರೆದುರು ಅಳಲು ತೋಡಿಕೊಂಡರು. ತಕ್ಷಣ ಸುಟ್ಟ ಕಬ್ಬಿನ ಪರಿಶೀಲನೆ ನಡೆಸಿ ಅಧಿಕಾರಿಗಳು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಿ ರೈತರಿಗೆ ಪರಿಹಾರ ದೊರೆಯುವಂತೆ ಮಾಡಬೇಕು ನಾನು ಸಹ ಮೇಲಧಿಕಾರಿಗಳ ಜೋತೆ ಈ ಘಟನೆ ಬಗ್ಗೆ ಚರ್ಚಿಸಿ ಆದಷ್ಟೂ ಬೇಗ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸುತ್ತೇನೆ ಎಂದು ನೊಂದ ರೈತರಿಗೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ ಶೈಲೇಂದ್ರ ಬೆಲ್ದಾಳೆ ಭರವಸೆ ನೀಡಿದರು.
Also read: ಮಹಿಳೆಯರ ಆರೋಗ್ಯದಲ್ಲಿ ಕ್ರಾಂತಿ ಸಾಧಿಸಲು ಎಐ ಆಧಾರಿತ ಫರ್ಟಿಲಿಟಿ ಸೆಂಟರ್ ಆರಂಭ
ಈ ಸಂದರ್ಭದಲ್ಲಿ ಮುಖಂಡರಾದ ಸುರೇಶ್ ಮಾಶೆಟ್ಟಿ, ಜಗನ್ನಾಥ ಪಾಟೀಲ್, ವೀರಶೆಟ್ಟಿ, ಶಿವಕಾಂತ ಶೇಖಾಪುರ, ನಾಗಶೆಟ್ಟಿ ಮೊಗದಾಳ, ನಂದಕುಮಾರ ಮಜಗೆ, ಚಂದ್ರಕಾAತ ಹಿಂದೊಡ್ಡಿ, ವೈಜಿನಾಥ, ರಾಜಕುಮಾರ ಖಿಳಗಿ, ಶಿವಕುಮಾರ, ವೀರಶೆಟ್ಟಿ, ಅಮರನಾಥ ಮತ್ತಿತರರು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















