ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಂಡೆಪ್ಪ ಖಾಶೆಂಪುರ್ Bandeppa Khashempur ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರಚಾರ ನಡೆಸುತ್ತಿದ್ದು, ಹೋದೆಡೆಯೆಲ್ಲಾ ಜನರು ಅವರನ್ನು ಅದ್ದೂರಿಯಾಗಿ ಸ್ವಾಗತಿಸುತ್ತಿದ್ದಾರೆ.
ಗ್ರಾಮ ಸಂಚಾರ ನಡೆಸುತ್ತಿರುವ ಅವರನ್ನು ಜನರು ಬಾಜಾ ಭಜಂತ್ರಿ, ಪಟಾಕಿ ಸಿಡಿಸುವುದರೊಂದಿಗೆ ಸ್ವಾಗತಿಸಿದರು. ಇದೇ ಸಂಭ್ರಮದೊಂದಿಗೆ ಗ್ರಾಮದ ದೇವಸ್ಥಾನ, ಚರ್ಚ್, ದರ್ಗಾ, ಮಸೀದಿಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಇನ್ನು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ರೇಕುಳಗಿ ಗ್ರಾಮದಲ್ಲಿ ಮತಯಾಚನೆ ನಡೆಸಿದ ಅವರು, ಮನೆಮನೆಗೆ ತೆರಳು ಮತ ಯಾಚಿಸಿದರು.
ಪ್ರಚಾರದೂದ್ದಕ್ಕೂ ಕೇಳಿಬಂದ ಸಡಗರ, ಸಂಭ್ರಮ, ಹರ್ಷೋದ್ಘಾರ, ಜೆಡಿಎಸ್ ಪರ ಘೋಷಣೆಗಳು ಪ್ರಚಾರದ ವೇಳೆ ನಾವು ನಿಮ್ಮೊಂದಿಗೆ ಇದ್ದೇವೆ. ಇದರಲ್ಲಿ ಎರಡು ಮಾತಿಲ್ಲ ಎಂದು ಗ್ರಾಮದ ಮಹಿಳೆಯರು ಭರವಸೆ ನೀಡಿದರು.
ಆನಂತರ, ಗ್ರಾಮದ ದೇವಸ್ಥಾನ, ಮಸೀದಿ, ಚರ್ಚ್’ಗಳಿಗೆ ಭೇಟಿ ನೀಡಿ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post