ಕಲ್ಪ ಮೀಡಿಯಾ ಹೌಸ್ | ಬೀದರ್ |
ವಿಶ್ವದಲ್ಲೇ ಎಲ್ಲಾ ಸಂವಿಧಾನಗಳಿಗಿಂತ ಶ್ರೇಷ್ಟ ಸಂವಿಧಾನ ಯಾವುದಾದರೂ ಇದ್ದರೆ ಅದು ಬಾಬಾ ಸಾಹೇಬರು ರಚಿಸಿದ ಹಿಂದುಸ್ತಾನ್ (ಭಾರತ) ಸಂವಿಧಾನವಾಗಿದೆ. ಅಂತಹ ಸಂವಿಧಾನವನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಜೆಡಿಎಸ್ ಕೋರ್ ಕಮಿಟಿಯ ಸದಸ್ಯರಾಗಿರುವ ಬಂಡೆಪ್ಪ ಖಾಶೆಂಪುರ್ Bandeppa Khashempur ಹೇಳಿದರು.
ಸಂವಿಧಾನ ಶಿಲ್ಪಿ, ಮಹಾನ್ ಚೇತನ, ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ Dr.B.R.Ambedkar ರವರ 67ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಬೀದರ್ ನಗರದ ಡಾ. ಬಿ.ಆರ್ ಅಂಬೇಡ್ಕರ್ ಸರ್ಕಲ್ ಬಳಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬಾಬಾ ಸಾಹೇಬರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು.

Also read: ಸಾಂಸ್ಕೃತಿಕ ನೆಲೆಯ ಭಾರತ, ಶಾಸ್ತ್ರ-ಸಂಪತ್ತುಗಳಿಂದಲೂ ಸಮೃದ್ಧ: ಚಿದಾನಂದಸ್ವಾಮಿ ಅಭಿಪ್ರಾಯ
ಈ ಸಂದರ್ಭದಲ್ಲಿ ಜ್ಞಾನಸಾಗರ್ ಬಂತೇಜಿ, ಬೀದರ್ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಮ್, ಸಮಾಜ ಕಲ್ಯಾಣ ಇಲಾಖೆಯ ಡಿಡಿ ಸಿಂಧು, ಪ್ರಮುಖರಾದ ಮಾರುತಿ ಬೌದ್ಧೆ, ಬಾಬು ಪಾಶ್ವಾನ್, ಅನಿಲ್ ಕುಮಾರ್, ಬಾಬುರಾವ್ ಕಾರ್ಬಾರಿ, ಬಸವರಾಜ್ ಮಾಳ್ಗೆ, ಅಮೃತರಾವ್ ಚಿಮ್ಕೊಡೆ, ಅಭಿ ಕಾಳೆ, ಅಂಬಾದಾಸ್ ಗಾಯಕವಾಡ, ಶಿವಕುಮಾರ್ ನಿಲಿಕಟ್ಟೆ, ಶ್ರೀಪತಿರಾವ್ ದಿನ್ನೆ, ಅರುಣಕುಮಾರ್ ವರ್ಮಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪ್ರಮುಖರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರಿದ್ದರು.











Discussion about this post