ಕಲ್ಪ ಮೀಡಿಯಾ ಹೌಸ್ | ಬೀದರ್ |
ಇತ್ತಿಚ್ಛೆಗೆ ನೂತನವಾಗಿ ಆಯ್ಕೆ ಮಾಡಲಾಗಿದ್ದ ಜೆಡಿಎಸ್ ಪಕ್ಷದ ತಾಲೂಕು ಘಟಕಗಳ ನೂತನ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮವೂ ನಗರದಲ್ಲಿರುವ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ಅವರ ನಿವಾಸದಲ್ಲಿ ನಡೆಯಿತು.


ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು, ಕಾರ್ಯಾಧ್ಯಕ್ಷರುಗಳಿಗೆ ಆದೇಶ ಪತ್ರಗಳನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಪಕ್ಷ ಬಲವರ್ಧನೆ, ಸಂಘಟನೆ, ಪಕ್ಷದ, ತತ್ವ ಸಿದ್ದಾಂತಗಳು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಕಾರ್ಯಾಧ್ಯಕ್ಷರುಗಳಿಗೆ ತಿಳಿಸಲಾಯಿತು.


ಶಾಸಕ ಬಂಡೆಪ್ಪ ಖಾಶೆಂಪುರ್, ಪಕ್ಷದ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲಪೂರ್ ರವರು ನೂತನ ಸದಸ್ಯರೊಂದಿಗೆ ಸಭೆ ನಡೆಸಿ, ಜೆಡಿಎಸ್ ಪಕ್ಷದ ಸಂಘಟನೆ, ಬಲವರ್ಧನೆಗಳ ಬಗ್ಗೆ ನೂತನ ಸದಸ್ಯರಿಗೆ ಮಾಹಿತಿ ನೀಡಿ, ಪಕ್ಷದ ಸದಸ್ಯತ್ವ ನೊಂದಣಿ ಮಾಡಿಸುವ ಕಾರ್ಯ ಚುರುಕುಗೊಳಿಸಿ, ಜಿಲ್ಲೆಯಲ್ಲಿ ಜೆಡಿಎಸ್ ಬಲಿಷ್ಟಗೊಳಿಸುವ ಕೆಲಸ ಮಾಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಂಜು ರೆಡ್ಡಿ ನಿರ್ಣಾ, ಕಾರ್ಯಾಧ್ಯಕ್ಷ ಎಮ್.ಡಿ ಇಸ್ಮಾಯಿಲ್, ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಬಸವರಾಜ್ ಪಾಟೀಲ್ ಹಾರೂರ್ ಗೇರಿ, ಔರಾದ್ ತಾಲೂಕು ಅಧ್ಯಕ್ಷ ತಾನಾಜಿ, ಕಾರ್ಯಾಧ್ಯಕ್ಷ ರಾಜಪ್ಪಾ, ಬಾಲ್ಕಿ ತಾಲೂಕಿನ ಅಧ್ಯಕ್ಷ ಮಲ್ಲಿಕಾರ್ಜುನ್ ನೇಳಗೆ, ಬಾಲ್ಕಿ ನಗರ ಅಧ್ಯಕ್ಷ ರೌಫ ಪಟೇಲ್, ಬಸವಕಲ್ಯಾಣ ತಾಲೂಕು ಅಧ್ಯಕ್ಷ ಅರ್ಶದ್ ಅಲಿ ಮಹಾಗಾವಿ, ಕಾರ್ಯಾಧ್ಯಕ್ಷ ಆಕಾಶ್ ಖಂಡಾಲೆ, ಹುಮನಾಬಾದ್ ತಾಲೂಕು ಅಧ್ಯಕ್ಷ ಮಹೇಶ ಅಗಡಿ, ಕಾರ್ಯಾಧ್ಯಕ್ಷ ಬಾಬುರಾವ್ ಪಿಸ್ಕೆ ಮತ್ತು ಸತೀಶ್ ರಾಂಪೂರೆ ಮುಖಂಡರಾದ ರಾಜು ಚಿಂತಾಮಣಿ ಸೇರಿದಂತೆ ಅನೇಕರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















