ಕಲ್ಪ ಮೀಡಿಯಾ ಹೌಸ್ | ಬೀದರ್ |
ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರು, ಜೆಡಿಎಸ್ ಅಭ್ಯರ್ಥಿಯಾಗಿರುವ ಬಂಡೆಪ್ಪ ಖಾಶೆಂಪುರ್ Bandeppa Khashempur ರವರು ಶುಕ್ರವಾರ ಸಂಜೆ ಸುರಿದ ಜೋರು ಮಳೆಯ ನಡುವೆಯೂ ಕ್ಷೇತ್ರದ ವಿವಿಧೆಡೆ ಮತಯಾಚನೆ ನಡೆಸಿದರು.
ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಕ್ಷೇತ್ರದ ಬಾಪೂರಿನಲ್ಲಿ ಪ್ರಚಾರ ನಡೆಸುವ ವೇಳೆಯಲ್ಲಿ ಇಲ್ಲದ ಮಳೆ, ಸಿರ್ಸಿ ಎ ಗ್ರಾಮದ ಪ್ರಚಾರದ ವೇಳೆಯಲ್ಲಿ ಜೋರಾಗಿ ಸುರಿಯಲಾರಂಬಿಸಿತು. ಸುರಿಯುವ ಮಳೆಯ ನಡುವೆಯೇ ಸ್ವಲ್ಪ ಹೊತ್ತು ಪ್ರಚಾರ ನಡೆಸಿದ ಶಾಸಕರು ವರುಣದೇವನ ವಿರಾಮದ ಬಳಿಕ ಗ್ರಾಮ ಸಂಚಾರ ನಡೆಸಿ ಜೆಡಿಎಸ್ ಗೆ ಮತ ನೀಡುವಂತೆ ಮನವಿ ಮಾಡಿದರು. ಬಳಿಕ ಟಿ ಮರ್ಜಾಪೂರ ಸೇರಿದಂತೆ ವಿವಿಧೆಡೆ ಮತಯಾಚನೆ ನಡೆಸಿದರು.
ಅದ್ದೂರಿಯಾಗಿ ಸ್ವಾಗತ ಕೋರಿದ ಕಾರ್ಯಕರ್ತರು, ಅಭಿಮಾನಿಗಳು:
ಮತಯಾಚನೆ ನಡೆಸಲು ಆಗಮಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರನ್ನು ಗ್ರಾಮಗಳ ಅಭಿಮಾನಿಗಳು, ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿಕೊಂಡರು. ಈ ವೇಳೆ ಶಾಸಕರು ಗ್ರಾಮಗಳ ಮಂದಿರ, ದರ್ಗಾ, ಚರ್ಚ್ ಗಳಿಗೆ ಭೇಟಿ ನೀಡಿ ಪೂಜೆ, ಪ್ರಾರ್ಥನೆ ಸಲ್ಲಿಸಿ, ಮಹಾತ್ಮರ ಪುತ್ಥಳಿ, ಪ್ರತಿಮೆ, ಪೋಟೋಗಳಿಗೆ ಮಾಲಾರ್ಪಣೆ ಮಾಡಿದರು.
Also read: ರೋಡ್ ಶೋನಲ್ಲಿ ಸಾಗುತ್ತಲ್ಲೇ ಮಂತ್ರಾಲಯ ಶ್ರೀಗಳಿಗೆ ನಮಿಸಿದ ಪ್ರಧಾನಿ ಮೋದಿ
ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸಲು ಶಾಸಕ ಬಂಡೆಪ್ಪ ಖಾಶೆಂಪುರ್ ಮನವಿ:
ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷವನ್ನು ಕ್ಷೇತ್ರದ ಜನರು ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸಬೇಕು. ಆ ಮೂಲಕ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಲು ಪ್ರೋತ್ಸಾಹ ನೀಡಬೇಕೆಂದು ಮತಯಾಚನೆಯ ವೇಳೆಯಲ್ಲಿ ಜೆಡಿಎಸ್ ಅಭ್ಯರ್ಥಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನರಿಗೆ ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post