ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ರಾಜಗೇರಾ, ಸಿಂದೋಲ್ ತಾಂಡಗಳಲ್ಲಿ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಕ್ಷೇತ್ರದ ಶಾಸಕರು, ಜೆಡಿಎಸ್ ಅಭ್ಯರ್ಥಿಯಾಗಿರುವ ಬಂಡೆಪ್ಪ ಖಾಶೆಂಪುರ್ ರವರು Bandeppa Khashempur ಮತಯಾಚನೆ ಯಾತ್ರೆ (ಚುನಾವಣಾ ಪ್ರಚಾರ) ನಡೆಸಿದರು.
ಬೀದರ್ ದಕ್ಷಿಣ ಕ್ಷೇತ್ರದ ರಾಜಗೇರಾ ಗ್ರಾಮದ ಹನುಮಾನ್ ಮಂದಿರಕ್ಕೆ ಗುರುವಾರ ಭೇಟಿ ನೀಡಿ ದರ್ಶನ ಪಡೆದು ಪ್ರಚಾರ ಆರಂಭಿಸಿದ ಅವರು, ರಾಜಗೇರಾ, ಸಿಂದೋಲ್ ತಾಂಡಗಳ ವಿವಿಧ ಏರಿಯಾಗಳಲ್ಲಿ ಮತಯಾಚನೆ ನಡೆಸಿದರು. ಶಾಸಕ ಬಂಡೆಪ್ಪ ಖಾಶೆಂಪುರ್ ರವರನ್ನು ಗ್ರಾಮಸ್ಥರು ಬಾಜಾ ಭಜಂತ್ರಿಯೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು. ಈ ವೇಳೆ ಶಾಸಕರು, ರಾಜಗೇರಾ, ಸಿಂದೋಲ್ ತಾಂಡಗಳ ದೇವಸ್ಥಾನ, ಚರ್ಚ್ ಗಳಿಗೆ ಭೇಟಿ ನೀಡಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, ನಮ್ಮ ಪಕ್ಷ ಬಡವರ, ರೈತರ, ಶ್ರಮಿಕರ ಪರವಾಗಿರುವ ಪಕ್ಷವಾಗಿದೆ. ನಾಡಿನ ಬಡವರ, ರೈತರ, ಶ್ರಮಿಕರ ಒಳಿತಿಗಾಗಿ ಅನೇಕ ಮಹತ್ಚದ ಯೋಜನೆಗಳನ್ನು ನಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದ್ದೇವೆ. ಮಹಿಳಾ ಸಹಕಾರ ಸಂಘಗಳ ಸಾಲಮನ್ನಾ, ರೈತರ ಕೃಷಿ ಖರ್ಚಿಗಾಗಿ ಸಹಾಯಧನ ನೀಡುವುದು ಸೇರಿದಂತೆ ಅನೇಕ ಯೋಜನೆಗಳನ್ನು ನಾವು ಜಾರಿಗೆ ತರುತ್ತೇವೆ ಎಂದರು.
ಈಗ ಗ್ಯಾಸ್ ಸಿಲಿಂಡರ್ 12 ನೂರು ರೂ. ಹೆಚ್ಚಿಗೆ ಆಗಿದೆ. ನಮ್ಮ ಸರ್ಕಾರ ಬಂದ ಕೂಡಲೇ ನಾವು ವರ್ಷಕ್ಕೆ ಐದು ಸಿಲಿಂಡರ್ ಗಳನ್ನು ಉಚಿತವಾಗಿ ನೀಡುತ್ತೇವೆ. ಕ್ಷೇತ್ರದ ಜನರು ಇವೆಲ್ಲವೂಗಳನ್ನು ಗಮನಿಸಬೇಕು. ನಮ್ಮ ಜೆಡಿಎಸ್ ಪಕ್ಷಕ್ಕೆ ಮತ ನೀಡಬೇಕು. ಕ್ರಮ ಸಂಖ್ಯೆ ನಾಲ್ಕರ ಭತ್ತದ ಹೊರೆ ಹೊತ್ತ ಮಹಿಳೆಯ ಗುರುತಿಗೆ ಮತ ನೀಡಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಮನವಿ ಮಾಡಿದರು.
ಬಿಜೆಪಿ ಗೆದ್ದರೇ ನಮಗೆ ಉಳಿಗಾಲವಿಲ್ಲ: ಮಾರುತಿ ಬೌದ್ಧೆ
ಜೆಡಿಎಸ್ ರಾಜ್ಯ ನಾಯಕರಾದ ಮಾರುತಿ ಬೌದ್ಧೆರವರು ಮಾತನಾಡಿ, ಬಂಡೆಪ್ಪ ಖಾಶೆಂಪುರ್ ರವರು ಕ್ರೈಸ್ತರ ಪರವಾಗಿ ಸದನದಲ್ಲಿ ಧ್ವನಿ ಎತ್ತುವ ಕೆಲಸ ಮಾಡಿದ್ದಾರೆ. ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ ಚಂದ್ರಾಸಿಂಗ್ ಮತ್ತು ನಸಿಂ ಪಟೇಲ್ ರವರು ಬಿಜೆಪಿ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ನೀಡಬಾರದು. ಬಿಜೆಪಿ ಗೆದ್ದರೆ ನಮಗೆ ಉಳಿಗಾಲವಿಲ್ಲ. ಅವರು ಸಂವಿಧಾನ ಬದಲಿಸುವ ಮನಸ್ಥಿತಿಯವರಾಗಿದ್ದಾರೆ. ನಾವೆಲ್ಲರೂ ಬಂಡೆಪ್ಪ ಖಾಶೆಂಪುರ್ ರವರಿಗೆ ಮತ ನೀಡೋಣವೆಂದು ಮಾರುತಿ ಬೌದ್ಧೆರವರು ಕರೆ ನೀಡಿದರು. ಜೆಡಿಎಸ್ ರಾಜ್ಯ ನಾಯಕ ರಾಜು ಕಡ್ಯಾಳ ಸೇರಿದಂತೆ ಅನೇಕರು ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಪರ ಮತಯಾಚನೆ ನಡೆಸಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















