ಕಲ್ಪ ಮೀಡಿಯಾ ಹೌಸ್ | ಬೀದರ್ |
ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕರು, ಮಾಜಿ ಕೇಂದ್ರ ಸಚಿವರಾದ ಬಸನಗೌಡ ಪಾಟೀಲ್ ಯತ್ನಾಳರವರ ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತದ ಕಾರ್ಯಕ್ಕೆ ಶಾಸಕ ಬಂಡೆಪ್ಪ ಖಾಶೆಂಪುರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮನ್ನಾಎಖೇಳ್ಳಿಯಲ್ಲಿ ನೂತನವಾಗಿ ಆರಂಭವಾದ ಸಿದ್ದಸಿರಿ ಸೌಹಾರ್ದ ಸಹಕಾರಿ ನಿಯಮಿತದ 152ನೇ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳರವರು ಆರಂಭಿಸಿದ ಸಿದ್ಧಸಿರಿ ಸಹಕಾರಿ ಬ್ಯಾಂಕ್ ನಿಂದ ನಮ್ಮ ಭಾಗದ ಜನರಿಗೆ ಅನುಕೂಲವಾಗುತ್ತದೆ ಎಂಬ ವಿಶ್ವಾಸ ನಮಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವರು, ವಿಜಯಪುರ ನಗರ ಕ್ಷೇತ್ರದ ಶಾಸಕರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ರವರು, ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ ಆರಂಭವಾದ 16 ವರ್ಷದಲ್ಲಿ 2134 ಕೋಟಿ ರೂ. ಠೇವಣಿ ಹೊಂದಿದೆ. ನಮ್ಮಲ್ಲಿ ಅತ್ಯುತ್ತಮ ಸಾಲಸೌಲಭ್ಯ ವ್ಯವಸ್ಥೆ ಇದೆ. ನಮ್ಮ ಬ್ಯಾಂಕ್ ನಲ್ಲಿ ದೊಡ್ಡದೊಡ್ಡ ಶ್ರೀಮಂತರು, ಬಡಜನರು ಕೂಡ ಸಾಲ ಪಡೆದುಕೊಂಡಿದ್ದಾರೆ. ನಮ್ಮಲ್ಲಿ ಪಿಗ್ನಿ ಕಲೆಕ್ಷನ್ ಕೂಡ ಮಾಡಲಾಗುತ್ತದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೇಮಳಖೇಡ ಹಿರೇಮಠ ಸಂಸ್ಥಾನದ ಶ್ರೀ ?.ಬ್ರ.ಡಾ. ರಾಜಶೇಖರ ಶಿವಾಚಾರ್ಯ ಸ್ವಾಮೀಜಿರವರು ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಗತಿಪರ ರೈತರಾದ ಸಂಗಪ್ಪ ಶಾಮರಾವ್ ಮಾಲಿಪಾಟೀಲ್, ನಾರಾಯಣರೆಡ್ಡಿ ಗೀರಾರೆಡ್ಡಿ ಶೇರಿಕಾರ, ಉದ್ದಿಮೆದಾರ ಅರುಣಕುಮಾರ್ ಕುಲಕರ್ಣಿ, ಅಶೋಕ ಖೂಬಾ, ಶಂಕರಪ್ಪರಾವ್ ಮಾಲೀಪಾಟೀಲ್ ರವರು ಸೇರಿದಂತೆ ಅನೇಕರಿದ್ದರು.












Discussion about this post