ಕಲ್ಪ ಮೀಡಿಯಾ ಹೌಸ್ | ಬೀದರ್ |
ಜಿಲ್ಲೆಯಲ್ಲಿ ಈಗಾಗಲೇ ಬರ ಘೋಷಣೆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ MLA Shylendra Beldale ಅವರು ಹೇಳಿದರು.
ಬೀದರ್ ನಗರದಲ್ಲಿರುವ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ, ಕೃಷಿ ಹಾಗೂ ತೋಟಗಾರಿಕೆ, ಪಶು ಇಲಾಖೆ, ಕಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

Also read: ಡಿ.11ರಿಂದ 17: ಜಾವಳ್ಳಿ ಜ್ಞಾನದೀಪ ಸೀನಿಯರ್ ಸೆಂಕಡರಿ ಶಾಲೆಯ ರಜತ ಮಹೋತ್ಸವ
ಬೇಸಿಗೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ, ಮೇವಿನ ಕೊರತೆಯಾಗದಂತೆ ಎಚ್ಚರ ವಹಿಸಬೇಕು ಮತ್ತು ಪರಿಸರ ಬೆಳೆಸಿ ಉಳಿಸಲು ರೈತರಲ್ಲಿ ಜಾಗೃತಿ ಮೂಡಿಸಬೇಕು. ಗುಳೆ ಓಡಾಡುವ ಜಾನುವಾರುಗಳನ್ನು ಗುರುತಿಸಿ ಗೋಶಾಲೆಗೆ ಒಪ್ಪಿಸಬೇಕು ಅದರಿಂದ ಯಾವುದೇ ಪಶು ಮೇವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗುದಿಲ್ಲ ಖಾಸಗಿಯಾಗಿ ರೈತರು ಮೇವು ಬೆಳೆಯಲು ಉತ್ತೇಜನ ನೀಡುವಂತಹ ಯೋಜನೆ ಜಾರಿಗೆ ತಂದು ಸರ್ಕಾರದಿಂದ ರೈತ ಬೆಳೆದ ಮೇವು ಖರೀದಿಸಿ ಗೋಶಾಲೆಯಲ್ಲಿ ಮೇವು ತಲುಪಿಸುಲ ವ್ಯವಸ್ಥೆ ಮಾಡಿದರೆ ಮೇವಿಲ್ಲದೆ ಜಾನುವಾರುಗಳು ಪರದಾಡ ಸ್ಥಿತಿ ನಿರ್ಮಾಣವಾಗಲ್ಲ ಈ ಕುರಿತು ಹೆಚ್ಚಿನ ಗಮನ ಹರಿಸಬೇಕು ಎಂದರು.

ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗಾಗಿ ಸರಕಾರದಿಂದ ಬರುವ ಎಲ್ಲ ಸೌಲಭ್ಯ ಸಮರ್ಪಕವಾಗಿ ದೊರೆಯುವಂತೆ ಮಾಡಬೇಕು. ಇದೀಗ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಂಗಾರು ಬೆಳೆ ಕೈ ಕೊಟ್ಟ ಪರಿಣಾಮ ಹಿಂಗಾರು ಹಂಗಾಮಿನ ಬೆಳೆ ಉತ್ತಮವಾಗಿ ಬೆಳೆಯಲು ಹನಿ ನೀರಾವರಿ ವ್ಯವಸ್ಥೆಗೆ ತುಂತುರು ವ್ಯವಸ್ಥೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಕಂಡುಬAದಿಲ್ಲ ತಕ್ಷಣ ಸಂಪರ್ಕಿಸಿ ನಾನು ಸ್ಪಂದಿಸುವೆ ಎಂದು ಜನರಲ್ಲಿ ಮನವಿ ಮಾಡಿದರು ಹಾಗೂ ಅಧಿಕಾರಿಗಳು ಸಹ ಜನರಿಗೆ ಸ್ಪಂದನೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.










Discussion about this post