ಕಲ್ಪ ಮೀಡಿಯಾ ಹೌಸ್ | ಬೀದರ್ |
ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಕಲಾವಿದರ ಪರ ಧ್ವನಿ ಎತ್ತುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಸದನದಲ್ಲಿ ಅವರು ಕಲಾವಿದರ ಪರ ಧ್ವನಿ ಎತ್ತಿದ್ದಾರೆ. ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ವಿಜಯಕುಮಾರ್ ಸೋನಾರೆರವರು ಮನವಿ ಮಾಡಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕೋಳಾರ ಕೆ ಗ್ರಾಮದಲ್ಲಿ ಭಾನುವಾರ ರಾತ್ರಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರ ನೇತೃತ್ವದಲ್ಲಿ ನಡೆದ ಜೆಡಿಎಸ್ ಪಕ್ಷದ ಮತಯಾಚನಾ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಂಡೆಪ್ಪ ಖಾಶೆಂಪುರ್ ರವರು ಒಳ್ಳೆಯ ಶಾಸಕರಾಗಿದ್ದಾರೆ. ಇಂತವರನ್ನು ನಾವು ಕಳೆದುಕೊಳ್ಳಬಾರದು, ಮತ್ತೊಮ್ಮೆ ಅವರನ್ನು ಗೆಲ್ಲಿಸಿ ವಿಧಾನಸೌದಕ್ಕೆ ಕಳಿಸುವ ಕೆಲಸ ಮಾಡಬೇಕೆಂದು ಕೈಮುಗಿದು ವಿನಂತಿ ಮಾಡಿದರು.
ಕಲ್ಯಾಣ ಕರ್ನಾಟಕದ ಕಲಾವಿದರ ಪರವಾಗಿ, ಸಾಹಿತಿಗಳ ಪರವಾಗಿ ಧ್ವನಿ ಎತ್ತುವಂತೆ ನಾವು ಬಹುತೇಕ ಶಾಸಕರಿಗೆ ಮನವಿ ಮಾಡಿದ್ದೇವು ಆದರೇ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾತ್ರ ನಮ್ಮ ಪರವಾಗಿ ಸದನದಲ್ಲಿ ಧ್ವನಿ ಎತ್ತಿದ್ದಾರೆ. ಈ ಭಾಗದಲ್ಲಿ ನಾವು ಸುಮಾರು 12 ಸಾವಿರ ಜನ ಕಲಾವಿದರು ಇದ್ದಿವಿ. ಶಾಸಕ ಬಂಡೆಪ್ಪ ಖಾಶೆಂಪುರ್ ರವರನ್ನು ಗೆಲ್ಲಿಸುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅವರು ಡಿಸಿಎಂ ಆಗಲಿದ್ದಾರೆ.
ಇಂತಹ ನಾಯಕರನ್ನು ನಾವು ಕಳೆದುಕೊಳ್ಳುವುದು ಭೇಡ. ಅವರ ತಮ್ಮ ಮನಗೆ ಬಂದವರನ್ನು ಪ್ರೀತಿಯಿಂದ ಸ್ವಾಗತಿಸಿ ಉಪಚರಿಸುತ್ತಾರೆ. ನಾವೆಲ್ಲರೂ ಸೇರಿ ಅವರಿಗೆ ಮತ ನೀಡಿ ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸುವ ಕೆಲಸ ಮಾಡೋಣ ಎಂದು ಕಲಾವಿದ ವಿಜಯಕುಮಾರ್ ಸೋನಾರೆರವರು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕೈಮುಗಿದು ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post