ಶ್ರೀನಗರ: ಒಂದೆಡೆ ಲೋಕಸಭಾ ಚುನಾವಣೆಯ ಬ್ಯುಸಿಯಲ್ಲಿ ದೇಶದಲ್ಲಿವಿದ್ದರೆ, ಇನ್ನೊಂದೆಡೆ ಇದೇ ಸಮಯ ಎಂಬಂತೆ ಪಾಕಿಸ್ಥಾನಿ ಉಗ್ರರು ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಮುಂದಾಗಿದ್ದಾರೆ. ಆದರೆ, ಇವರಿಗೆ ಸರಿಯಾದ ಪಾಠ ಕಲಿಸಲು ಹೆಮ್ಮೆಯ ಭಾರತೀಯ ಸೇನೆ ಮುಂದಾಗಿದೆ.
ಗಡಿಯ ಭಾಗದಲ್ಲಿ ಉಗ್ರರ ಉಪಟಳ ನಿರಂತರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೆರಳಿ ನಿಂತಿರುವ ಭಾರತೀಯ ಯೋಧರು ಈ ಭಾಗದಲ್ಲಿ ಹುಡುಕಿ ಹುಡುಕಿ ಅಕ್ಷರಶಃ ಅಟ್ಟಾಡಿಸಿಕೊಂಡು ಪ್ರಾಣಿಗಳನ್ನು ಬೇಟೆಯಾಡುವಂತೆ ಬಲಿ ಹಾಕುತ್ತಿದ್ದಾರೆ.
ಪ್ರಮುಖವಾಗಿ, 42 ಸಿಆರ್’ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಮಾ ಜಿಲ್ಲೆಯ ಮಿಧುರಾ ಟ್ರೈಲ್ಸ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅವಿತಿರುವ ಖಚಿತ ಮಾಹಿತಿಯನ್ನಾಧರಿಸಿ, ಯೋಧರು ಕಾರ್ಯಾಚರಣೆ ನಡೆಸಿದ್ದಾರೆ.
ಕೋರ್ಡಾನ್ ಕಾರ್ಯಾಚರಣೆ ಆರಂಭಿಸಿರುವ ಇಡಿಯ ಪ್ರದೇಶವನ್ನು ಯೋಧರು ಸುತ್ತುವರೆದಿರುವ ಬೆನ್ನಲ್ಲೇ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಸೇನೆ ನಿರಂತರವಾಗಿ ಪ್ರತಿದಾಳಿ ನಡೆಸುತ್ತಿದೆ.
ರಾಷ್ಟ್ರೀಯ ರೈಫಲ್ಸ್, ವಿಶೇಷ ಕಾರ್ಯಾಚರಣಾ ಪಡೆ, ರಾಜ್ಯ ಪೊಲೀಸ್ ಮತ್ತು ಸಿಆರ್’ಪಿಎಫ್ ಯೋಧರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕೋರ್ಡಾನ್ ಕಾರ್ಯಾಚರಣೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಇಡಿಯ ಪ್ರದೇಶದಲ್ಲಿ ಇಂಟರ್’ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಇನ್ನು, ಶೋಪಿಯಾನ್ ಜಿಲ್ಲೆಯಲ್ಲಿ ನಿನ್ನೆ ಕಾರ್ಯಾಚರಣೆ ನಡೆಸಿದ ಸೇನೆ ಇಬ್ಬರು ಉಗ್ರರನ್ನು ಬಲಿ ಹಾಕುವಲ್ಲಿ ಯಶಸ್ವಿಯಾಗಿತ್ತು. ನಿನ್ನೆಯ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ, ಸಿಆರ್’ಪಿಎಫ್ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಪಾಲ್ಗೊಂಡಿದ್ದರು.
Discussion about this post