ಬೆಂಗಳೂರು: ಭಾರತದ ಅತಿ ದೊಡ್ಡ ರೇಡಿಯೋ ಜಾಲ 92.7 ಬಿಗ್ ಎಫ್ ಎಂ ನಲ್ಲಿ ನೀಲೇಶ್ ಮಿಶ್ರಾ ಅವರ ಯಾದೋ ಕಾ ಈಡಿಯಟ್ ಬಾಕ್ಸ್ ಕಾರ್ಯಕ್ರಮ ಮತ್ತೆ ಆರಂಭಗೊಂಡಿದೆ.
ಇದೊಂದು ರೇಡಿಯೋದಲ್ಲಿ ಕತೆ ಹೇಳುವ ಕಾರ್ಯಕ್ರಮ. ಕಳೆದ ನಾಲ್ಕು ವರ್ಷಗಳಲ್ಲಿ ಮೋಡಿ ಮಾಡಿರುವ ಈ ಕಾರ್ಯಕ್ರಮ ಹೆಚ್ಚಿನ ಸಂಖ್ಯೆಯ ಕೇಳುಗರನ್ನು ಹುಟ್ಟುಹಾಕಿದೆ.
ಕತೆಯನ್ನು ಕೇಳುಗರ ಮನಸ್ಸಿಗೆ ತಾಕುವಂತೆ ಹೇಳುವ ನೀಲೇಶ್ ಮಿಶ್ರಾ ಅವರ ತಂಡ ಇದೀಗ ಐದನೇ ಸುತ್ತಿಗೂ ಕೇಳುಗರಿಗೆ ಮಧುರ ಅನುಭವ ನೀಡಲು ಮುಂದಾಗಿದೆ.
ದೇಶದಾದ್ಯಂತ 53 ಚಾನೆಲ್ ಗಳಲ್ಲಿ ಜುಲೈ 2ರಿಂದ ಕಾರ್ಯಕ್ರಮ ಪ್ರಸಾರವಾಗಿದ್ದು ವಾರದ ದಿನಗಳಲ್ಲಿ ರಾತ್ರಿ 10ರಿಂದ 11ರವರೆಗೆ ಅಸಾಧಾರಣ ಕತೆಗಳನ್ನು ಕೇಳಬಹುದಾಗಿದೆ.
ನೀಲೇಶ್ ಮಿಶ್ರಾ ಅವರ ಯಾದೋ ಕಾ ಈಡಿಯಟ್ ಬಾಕ್ಸ್ ಕಾರ್ಯಕ್ರಮದ ಅನಾವರಣ ಸಂದರ್ಭ ಮಾತನಾಡಿದ ರಿಲಯನ್ಸ್ ಬ್ರಾಡ್ ಕಾಸ್ಟ್ ನೆಟ್ವರ್ಕ್ ಲಿಮಿಟೆಡ್ ನ ಚೀಫ್ ಫಿನಾನ್ಸಿಯಲ್ ಆಫೀಸರ್ ಆಶಿಶ್ ಚಟರ್ಜಿ, ಯಾದೋ ಕಿ ಈಡಿಯಟ್ ಬಾಕ್ಸ್ ಸೀಸನ್ 5ಕ್ಕೆ ದೇಶದಾದ್ಯಂತ ಉತ್ತಮ ಕೇಳುಗರಿದ್ದಾರೆ.
ಯಾದೋ ಕಿ ಈಡಿಯಟ್ ಬಾಕ್ಸ್ ಸೀಸನ್ 5ರ ಬಗ್ಗೆ ಮಾತನಾಡಿದ ಟ್ವಿಂಕ್ ಬಿಗ್ ನ ಕಂಟ್ರಿ ಹೆಡ್ ಸುನಿಲ್ ಕುಮಾರನ್, ರೇಡಿಯೋದಲ್ಲಿ ಇದೇ ಮೊದಲ ಬಾರಿಗೆ ನೀಲೇಶ್ ಅವರ ಅಸಾಧಾರಣ ಶೈಲಿಯ ಪ್ರದರ್ಶನವೊಂದು ಪ್ರಸಾರವಾಗುತ್ತಿದೆ. ನೀಲೇಶ್ ಅತ್ಯುತ್ತಮ ಕಥಾ ನಿರೂಪಕರಲ್ಲಿ ಒಬ್ಬರಾಗಿದ್ದು ತಮ್ಮ ವಿಶಿಷ್ಟ ಶೈಲಿಯಿಂದ ಪ್ರಸಿದ್ಧರಾಗಿದ್ದಾರೆ. ಈ ಕಾರ್ಯಕ್ರಮ ಎಲ್ಲೆಡೆಯಿಂದ ಉತ್ತಮವಾಗಿ ಸ್ವೀಕರಿಸಲ್ಪಟ್ಟಿದ್ದು ಎಲ್ಲಾ ಪಾಲುದಾರರಿಗೆ ಅನುಕೂಲಕರ ಕೊಡುಗೆಯಾಗಿ ಮುಂದುವರಿಯುತ್ತದೆ. ಇದು ಭಾರತ ದೇಶ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ ಸೂಚನೆಯೂ ಹೌದು. ಈ ಕಾರ್ಯಕ್ರಮ ನಮ್ಮಲ್ಲಿ ಭರವಸೆ ತುಂಬಿದ್ದು ಕೇಳುಗರಲ್ಲೂ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿದೆ ಎಂದರು.
ಯಾದೋ ಕಾ ಈಡಿಯಟ್ ಬಾಕ್ಸ್ ಸೀಸನ್ 5 ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ನೀಲೇಶ್ ಮಿಶ್ರಾ, ರೇಡಿಯೋದಲ್ಲಿ ಕತೆ ಹೇಳುವ ಅಪಾಯಕಾರಿ ಕಾರ್ಯಕ್ರಮವನ್ನು ಮೊದಲ ಬಾರಿಗೆ ಆರಂಭಿಸಿದ್ದು 2011ರಲ್ಲಿ ಬಿಗ್ ಎಫ್ ಎಂ ಅವರು ನಮ್ಮ ಮೇಲಿಟ್ಟ ಭರವಸೆಯನ್ನು ನಾವು ಸುಳ್ಳು ಮಾಡಲಿಲ್ಲ. ಬಿಗ್ ಎಫ್ ಎಂ ಕುಟುಂಬದ ಭಾಗವಾಗಿರಲು ಹಾಗೂ ಯಾದೋ ಕಾ ಈಡಿಯಟ್ ಬಾಕ್ಸ್ ಕಾರ್ಯಕ್ರಮವನ್ನು ಮತ್ತೆ ಆರಂಭಿಸಲು ನನಗೆ ಸಂತಸವೆನಿಸುತ್ತದೆ ಎಂದರು.
ಕೇಳುಗರಿಗೆ ಮತ್ತೊಮ್ಮೆ ಆಹ್ಲಾದಕರ ಅನುಭವ ನೀಡಲು ಹಾಗೂ ಮತ್ತಷ್ಟು ಮಂದಿಯನ್ನು ಸೆಳೆಯಲು ನೀಲೇಶ್ ಮಿಶ್ರಾ ಹಾಗೂ ಅವರ ಸಮೃದ್ಧ ಬರಹಗಾರರ ತಂಡ ಮತ್ತಷ್ಟು ಸ್ಪೂರ್ತಿದಾಯಕ, ರಾಷ್ಟ್ರಪ್ರೇಮಿ ಕತೆಗಳೊಂದಿಗೆ ಸಜ್ಜಾಗಿದೆ. ಈಗಾಗಲೇ ಈ ಕಾರ್ಯಕ್ರಮ ಅಭೂತಪೂರ್ವ ಯಶಸ್ಸನ್ನು ಗಳಿಸಿದ್ದು ತನ್ನದೇ ಅದ ಪರಂಪರೆಯೊಂದನ್ನು ಸೃಷ್ಟಿಸಿಕೊಂಡಿದೆ. ಹಿಂದಿನ ವರ್ಷಗಳಲ್ಲಿ ಲಕ್ಷಾಂತರ ಕೇಳುಗರನ್ನು ತಲುಪುವ ಮೂಲಕ ಹೊಸ ದಾಖಲೆಯನ್ನೂ ಬರೆದಿದೆ.
ಭಾರತದಲ್ಲೇ ಅತಿ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡ ಕಾರ್ಯಕ್ರಮ ಇದಾಗಿದ್ದುಈಗಾಗಲೇ ಬೆಸ್ಟ್ ರೇಡಿಯೋ ಪ್ರೋಗ್ರಾಂ ಇನ್ ಹಿಂದಿ, ಆರ್ ಜೆ ಆಫ್ ದಿ ಯಿರ್ ಐಆರ್‍ಎಫ್ ಇನ್ 2016 ಪ್ರಶಸ್ತಿ ಪಡೆದುಕೊಂಡಿದೆ.
Discussion about this post