ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೇಂದ್ರ ಲೋಕಸೇವಾ ಆಯೋಗವು #UPSC 2022ನೆಯ ಸಾಲಿನ ನಾಗರಿಕ ಸೇವಾ ಪರೀಕ್ಷೆಯ #CivilServiceExam ಅಂತಿಮ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯದಿಂದ ಒಟ್ಟು 26 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಒಟ್ಟು 933 ಅಭ್ಯರ್ಥಿಗಳು ಈ ಬಾರಿ ದೇಶದಲ್ಲಿ ವಿವಿಧ ಸೇವೆಗಳಿಗೆ ಆಯ್ಕೆಯಾಗಿದ್ದು, ರಾಜ್ಯದ 26 ಮಂದಿ ಆಯ್ಕೆಯಾಗಿರುವುದು ಸಂತಸ ಮೂಡಿಸಿದೆ.

ಸದ್ಯ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಐಆರ್’ಎಸ್ ಸೇವೆಯಲ್ಲಿರುವ ರಾಜ್ಯದ ಎಚ್.ಎಸ್. ಭಾವನಾ 55ನೆಯ ರ‍್ಯಾಂಕ್ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿ ಬಳಿಕ ಯಲಹಂಕದ ವೆಂಕಟೇಶ್ವರ ಕಾಲೇಜಿನಲ್ಲಿ ಎಂಜಿನಿಯರಿಂಗ್ ಇವರು ಪೂರ್ಣಗೊಳಿಸಿದ್ದರು. ಐಎಎಸ್ ಅಧಿಕಾರಿ ಆಗಬೇಕು ಎಂದು ಯುಪಿಎಸ್’ಸಿ ಪರೀಕ್ಷೆ ಬರೆದು 2018ರಲ್ಲಿ ತೇರ್ಗಡೆಯಾಗಿದ್ದರು. ಆದರೆ ಆಗ ಐಆರ್’ಎಸ್ #IRS ಸೇವೆಗೆ ಮಾತ್ರ ಅವಕಾಶ ಸಿಕ್ಕಿತ್ತು. ಈಗ ಐಎಎಸ್ #IAS ಗುರಿಯನ್ನು ಈಡೇರಿಸಿಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾಗಿದ್ದುಕೊಂಡೇ ಸದ್ಯ ಪುದುಚೇರಿಯಲ್ಲಿ ಸೇವೆ ಸಲ್ಲಿಸುತ್ತಲೇ ಯುಪಿಎಸ್’ಸಿ #UPSC ಪರೀಕ್ಷೆಯಲ್ಲಿ ನಾಲ್ಕನೆಯ ಪ್ರಯತ್ನದಲ್ಲಿ ಧಾರವಾಡದ ಸೌರಭ್ ನರೇಂದ್ರ ಅವರು 198ನೆಯ ರ‍್ಯಾಂಕ್ ಪಡೆಯುವ ಮೂಲಕ ತಮ್ಮ ಕನಸು ಈಡೇರಿಸಿಕೊಂಡಿದ್ದಾರೆ.
ಚನ್ನಪಟ್ಟಣದ ಹುಡುಗಿಯ ಸಾಧನೆ
ಗೊಂಬೆಗಳ ನಾಡು ಚನ್ನಪಟ್ಟಣದ #Channapatna ದಾಮಿನಿ ಎಂ. ದಾಸ್ ಎಂಬ ಪ್ರತಿಭೆ 345ನೆಯ ರ‍್ಯಾಂಕ್ ಗಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ತಾಲೂಕಿನ ಮಳೂರುಪಟ್ಟಣದ ರೈತ ಮೋಹನ್ ದಾಸ್ ಪುತ್ರಿ ದಾಮಿನಿ ತಮ್ಮ ಎರಡನೆಯ ಪ್ರಯತ್ನದಲ್ಲಿ ಯುಪಿಎಸ್’ಸಿ ಪರೀಕ್ಷೆಯಲ್ಲಿ 345ನೆಯ ರ‍್ಯಾಂಕ್ ಪಡೆದಿದ್ದಾರೆ. ಕಂಪ್ಯೂಟರ್ ಸೈನ್ಸ್ ಎಂಜಿಯರಿಂಗ್ ಮಾಡಿರುವ ಇವರು, ಸಾಪ್ಟ್’ವೇರ್ ಕಂಪನಿಯಲ್ಲಿ ಕೆಲಸ ಮಾಡಿ, ಕೆಲಸಕ್ಕೆ ರಾಜೀನಾಮೆ ಕೊಟ್ಟು, ಯುಪಿಎಸ್’ಸಿ ಪರೀಕ್ಷೆಗೆ ಅಧ್ಯಯನ ನಡೆಸಿದ್ದರು.

ಬೆಳಗಾವಿಯ ಮೂಡಲಗಿ ತಾಲೂಕಿನ ಅರಭಾವಿ #Arabhavi ಪಟ್ಟಣದ ನಿವಾಸಿ ಶೃತಿ ಯರಗಟ್ಟಿ 362ನೆಯ ರ‍್ಯಾಂಕ್ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಕೆಸಿಡಿ ಧಾರವಾಡದಲ್ಲಿ #Dharwad ಪಿಯು ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿದ್ದ ಇವರು, ಬಿಎಸ್ಸಿ #BSC ವ್ಯಾಸಂಗ ಮಾಡಿ 7 ಚಿನ್ನದ ಪದಕ ಗಳಿಸಿದ್ದರು.
ಶೃತಿ ಯರಗಟ್ಟಿ ಅವರ ತಂದೆ ನಿವೃತ್ತ ಶಿಕ್ಷಕ ಶಿವಾನಂದ ಯರಗಟ್ಟಿ ಆಗಿದ್ದು, ಈಕೆಯ ತಾಯಿ ಮಹಾನಂದಾ ಎಂದು ತಿಳಿದುಬಂದಿದೆ. ಆರನೆಯ ಬಾರಿ ಪ್ರಯತ್ನದಲ್ಲಿ ಶೃತಿ ಯರಗಟ್ಟಿ ಅವರು 362ನೇ ರ‍್ಯಾಂಕ್ ಗಳಿಸಿದ್ದಾರೆ.

ರಾಮನಗರ #Ramanagar ಮೂಲದ ಯುವಕ ಚೆಲುವರಾಜು 238ನೆಯ ಸ್ಥಾನ ಪಡೆದಿದ್ದಾರೆ.
ಹಾರೋಹಳ್ಳಿ ತಾಲೂಕಿನ ದೊಡ್ಡಬಾದಿಗೆರೆ ಗ್ರಾಮದ ನಿವಾಸಿ ಚೆಲುವರಾಜು 3ನೆಯ ಬಾರಿಯ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರಾಗಿರುವ ಇವರು ಪಿಯುಸಿವರೆಗೂ ಸರ್ಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ ನಡೆಸಿದ್ದು, ಮೂಲತಃ ರೈತ ಕುಟುಂಬದವರಾಗಿದ್ದಾರೆ.
ಈ ಯುವತಿ ಮೈಸೂರಿನ ಹೆಮ್ಮೆ
ಸಾಂಸ್ಕೃತಿಕ ನಗರಿ ಮೈಸೂರಿನ #Mysore ಪೂಜಾ ಮುಕುಂದ್ ಅವರು ಸತತ ಮೂರು ವರ್ಷಗಳ ಪ್ರಯತ್ನದ ಫಲವಾಗಿ 390ನೆಯ ರ‍್ಯಾಂಕ್ ಗಳಿಸಿದ್ದಾರೆ. ಇಂಜಿನಿಯರಿಂಗ್ ಓದಿರುವ ಪೂಜಾ ಅವರು ಯುಪಿಎಸ್’ಸಿಯಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ತೇರ್ಗಡೆ ಹೊಂದಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯ ಪುತ್ರನ ಸಾಧನೆ
ಇನ್ನು, ಮೈಸೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯ ಪುತ್ರ ಡಾ.ಜೆ. ಭಾನುಪ್ರಕಾಶ್ ಅವರು 448ನೆಯ ರ‍್ಯಾಂಕ್ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಮೈಸೂರಿನ ಬೆಳವಾಡಿ ನಿವಾಸಿಯಾಗಿರುವ ಇವರು ಮೂಲತಃ ಮೈಸೂರು ಜಿಲ್ಲೆ ಕೆಆರ್ ನಗರ ತಾಲೂಕು ಕೆಸ್ತೂರು ಕೊಪ್ಪಲು ಗ್ರಾಮದವರು. ಜಯರಾಮೇಗೌಡ, ಅಂಗನವಾಡಿ ಕಾರ್ಯಕರ್ತೆ ಗಿರಿಜಮ್ಮ ದಂಪತಿ ಪುತ್ರ.
ಕಂಡಕ್ಟರ್ ಮಗನ ಸಾಧನೆ
ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಯುವಕ ಸಿದ್ದಲಿಂಗಪ್ಪ ಕೆ ಪೂಜಾರ್ ಯುಪಿಎಸ್’ಸಿ ಪರೀಕ್ಷೆಯಲ್ಲಿ 589ನೆಯ ರ‍್ಯಾಂಕ್ ಪಡೆದು ತೇರ್ಗಡೆ ಹೊಂದಿದ್ದಾರೆ.

ವಿಜಯಪುರ ಯುವಕನ ಸಾಧನೆ
ವಿಜಯಪುರ ಯುವಕ ಯಲಗೂರೇಶ ಅರ್ಜುನ ನಾಯಕ್ ಸಹ ಈ ಬಾರಿ ಯುಪಿಎಸ್’ಸಿ ಪರೀಕ್ಷೆಯಲ್ಲಿ 890ನೆಯ ರ‍್ಯಾಂಕ್ ಗಳಿಸುವ ಮೂಲಕ ಅರ್ಹತೆ ಪಡೆದಿದ್ದಾರೆ.
ಮುದ್ದೇಬಿಹಾಳ ತಾಲೂಕು ಸರೂರ್ ತಾಂಡಾ ನಿವಾಸಿಯಾದ ಯಲಗೂರೇಶ ಅರ್ಜುನ ನಾಯಕ್ ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಈ ಮೂಲಕ ತಾಂಡಾ ಹುಡುಗ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.
ರಾಜ್ಯದ ಟಾಪರ್’ಗಳು ಇವರು
- ಎಚ್.ಎಸ್. ಭಾವನಾ 55 ರ‍್ಯಾಂಕ್
- ಮೆಲ್ವಿನ್ ವರ್ಗೀಸ್ 155 ರ‍್ಯಾಂಕ್
- ಡಿ. ಸೂರಜ್ 197 ರ‍್ಯಾಂಕ್
- ಸೌರಭ ನರೇಂದ್ರ 198 ರ‍್ಯಾಂಕ್
- ಎ.ಎಲ್. ಆಕಾಶ್ 210 ರ‍್ಯಾಂಕ್
- ಪಿ. ಶ್ರವಣಕುಮಾರ್ 222 ರ‍್ಯಾಂಕ್
- ರವಿರಾಜ್ ಅಶ್ವಾಥಿ 224 ರ‍್ಯಾಂಕ್
- ಚಲುವರಾಜ್ 238 ರ‍್ಯಾಂಕ್
- ಕೆ. ಸೌರಭ್ 260 ರ‍್ಯಾಂಕ್
- ದಾಮಿನಿ ಎಂ.ದಾಸ್ 345 ರ‍್ಯಾಂಕ್
- ಶೃತಿ ಯರಗಟ್ಟಿ 362 ರ‍್ಯಾಂಕ್
- ಪೂಜಾ ಮುಕುಂದ್ 390 ರ‍್ಯಾಂಕ್
- ಜೆ. ಭಾನುಪ್ರಕಾಶ್ 448 ರ‍್ಯಾಂಕ್
- ಸಿ. ಸಮೀರ್ ರಾಜಾ 464 ರ‍್ಯಾಂಕ್
- ಟಿ. ಕೈಲಾಶ್ 465 ರ‍್ಯಾಂಕ್
- ಬಿ.ಎಸ್. ಧನುಷ್‌ಮ ಕುಮಾರ್ 501 ರ‍್ಯಾಂಕ್
- ಬಿ.ವಿ. ಶ್ರೀದೇವಿ 525 ರ‍್ಯಾಂಕ್
- ಆದಿನಾಥ್ ಪದ್ಮಣ್ಣ ತಮದಡ್ಡಿ 566 ರ‍್ಯಾಂಕ್
- ಆರ್. ರಾಹುಲ್ 582 ರ‍್ಯಾಂಕ್
- ಸಿದ್ದಲಿಂಗಪ್ಪ ಕೆ. ಪೂಜಾರ್ 589 ರ‍್ಯಾಂಕ್
- ಡಾ.ವರುಣ್ ಕೆ.ಗೌಡ 594 ರ‍್ಯಾಂಕ್
- ಐ.ಎಸ್. ಮೇಘನಾ 617 ರ‍್ಯಾಂಕ್
- ಸಿ.ಪಿ. ನಿಮಿಷಾಂಬ 659 ರ‍್ಯಾಂಕ್
- ಎಂ.ಎಸ್. ತನ್ಮಯ್ 690 ರ‍್ಯಾಂಕ್
- ಮೊಹಮ್ಮದ್ ಸಿದ್ದಿಕ್ ಶರೀಫ್ 745 ರ‍್ಯಾಂಕ್
- ಕೆ.ಎಚ್. ಅಭಿಷೇಕ್ 813 ರ‍್ಯಾಂಕ್
- ಎಚ್.ಎಸ್. ಪದ್ಮನಾಭ 923 ರ‍್ಯಾಂಕ್
- ಎಚ್.ಪಿ. ಮನೋಜ್ 929 ರ‍್ಯಾಂಕ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post