ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ #VHP ಹಮ್ಮಿಕೊಂಡಿರುವ ಮೂರು ದಿನಗಳ ದತ್ತ ಜಯಂತಿ #DattaJayanti ಉತ್ಸವಕ್ಕೆ ಇಂದು ಅಧಿಕೃತ ಚಾಲನೆ ದೊರೆತಿದೆ.
ದತ್ತ ಜಯಂತಿ ಉತ್ಸವದ ಮೂರು ದಿನಗಳ ಕಾರ್ಯಕ್ರಮದ ಮೊದಲ ದಿನವಾದ ಇಂದು ದತ್ತಪೀಠದಲ್ಲಿ #DattaPeeta ಅನಸೂಯ ಮಾತೆ ಪೂಜೆ ನಡೆದಿದೆ. ಶ್ರೀ ಬೋಳರಾಮೇಶ್ವರ ದೇವಾಲಯದಿಂದ ಮಾತೆಯರು ಮೆರವಣಿಗೆ ಹೊರಟು ಐಜಿ ರಸ್ತೆಯ ಮೂಲಕ ಆರ್’ಜಿ ರಸ್ತೆಯಲ್ಲಿರುವ ಶ್ರೀ ಕಾಮಧೇನು ಗಣಪತಿ ದೇವಾಲಯ ತಲುಪಿ ಅಲ್ಲಿಂದ ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆದು ಊರುಗಳಿಗೆ ವಾಪಸ್ ತೆರಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಚಾಲಕ ರಘು ಸಕಲೇಶಪುರ, ಅನಸೂಯ ಮಾತೆ ಪೂಜಾ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ ಸುಮಾರು 5 ಸಾವಿರ ಮಾತೆಯರು ಭಾಗವಹಿಸಿದ್ದಾರೆ.

ಮೊದಲ ಬಾರಿಗೆ ಅರ್ಚಕರಿಂದ ಪೂಜೆ, ಮುಗಿಲು ಮುಟ್ಟಿದ ಸಂಭ್ರಮ
ಇನ್ನು, ಇದೇ ಮೊಟ್ಟ ಮೊದಲ ಬಾರಿಗೆ ದತ್ತಪೀಠದಲ್ಲಿ ಅರ್ಚಕರಿಂದ ಪೂಜೆ ನಡೆಸಲು ಸರ್ಕಾರದ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.

ಬಿಗಿ ಪೊಲೀಸ್ ಭದ್ರತೆ, 46 ಚೆಕ್ ಪೋಸ್ಟ್
ದತ್ತ ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ ನಗರದಲ್ಲಿ ನಿನ್ನೆ ಪೊಲೀಸ್ ರೂಟ್ ಮಾರ್ಚ್ #PoliceRouteMarch ನಡೆಸುವ ಮೂಲಕ, ಸಾರ್ವಜನಿಕರಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ #LawAndOrder ಬಗ್ಗೆ ಜಾಗೃತಿ ಮೂಡಿಸಲಾಯಿತು.

ಈ ಬಾರಿ ದತ್ತ ಜಯಂತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ಬಂದೋಬಸ್ತ್’ಗಾಗಿ 3500 ಪೊಲೀಸರ ನಿಯೋಜನೆ ಮಾಡಿ, 46 ಚೆಕ್ ಪೋಸ್ಟ್ ತೆರೆಯಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post