ಕಲ್ಪ ಮೀಡಿಯಾ ಹೌಸ್ | ಛತ್ತೀಸ್’ಗಡ |
ವಿಧಾನಸಭಾ ಚುನಾವಣೆಯ #AssemblyElection ಮತ ಎಣಿಕೆ ಆರಂಭದಿಂದಲೂ ರಾಜ್ಯದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್ #Congress ಪಕ್ಷವನ್ನು ಏಕಾಏಕಿ ಹಿಂದಿಕ್ಕಿರುವ ಬಿಜೆಪಿ #BJP ಮುನ್ನುವ ಮೂಲಕ ಬಿಗ್ ಟ್ವಿಸ್ಟ್ ದೊರೆತಿದೆ.
ಮುಂಜಾನೆಯಿಂದಲೂ ರಾಜ್ಯದಲ್ಲಿ ಕಾಂಗ್ರೆಸ್ ಭಾರೀ ಮುನ್ನಡೆ ಕಾಯ್ದುಕೊಂಡಿತ್ತು. ಆನಂತರ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಹಾವು ಏಣಿ ರೀತಿಯಲ್ಲಿ ಹೋರಾಟ ನಡೆದಿತ್ತು. ಆದರೆ, 10.30ರ ನಂತರ ಚಿತ್ರಣವೇ ಬದಲಾಯಿತು.
ಬೆಳಗ್ಗೆ 10.30 ರ ಮಾಹಿತಿಯಂತೆ ರಾಜ್ಯದಲ್ಲಿ ಬಿಜೆಪಿ 49, ಕಾಂಗ್ರೆಸ್ 39 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಈಗಾಗಲೇ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಅಧಿಕಾರ ಹಿಡಿಯುವತ್ತ ಬಿಜೆಪಿ ಮುನ್ನಡೆ ಸಾಗಿದೆ. ತೆಲಂಗಾಣದಲ್ಲಿ ಬಿಆರ್’ಎಸ್ ಪಕ್ಷವನ್ನು ಹೀನಾಯವಾಗಿ ಹಿಂದಿಕ್ಕಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಬಹುತೇಕ ನಿಶ್ಚಿತವಾಗಿದೆ.
ಆರಂಭದಿಂದಲೂ ಛತ್ತೀಸ್’ಗಡದಲ್ಲೂ ಸಹ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ, ಬಿಗ್ ಟ್ವಿಸ್ಟ್ ದೊರತಿದ್ದು, ಬಿಜೆಪಿ ಭಾರೀ ಮುನ್ನಡೆ ಕಾಯ್ದುಕೊಂಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post