ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಎಲೆಕ್ಟ್ರಾನಿಕ್ ಇನ್-ಮೋಷನ್ ವೇ ಬ್ರಿಡ್ಜ್ ಅಳವಡಿಕೆಗಾಗಿ ಅಡಿಪಾಯದ ಕಾಮಗಾರಿಯ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿನ ವ್ಯಾಸ ಕಾಲೋನಿ ನಿಲ್ದಾಣದಲ್ಲಿ ರೈಲುಗಳ ನಿಲುಗಡೆ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು, ಎಲೆಕ್ಟ್ರಾನಿಕ್ ಇನ್-ಮೋಷನ್ ವೇ ಬ್ರಿಡ್ಜ್ ಅಳವಡಿಕೆಗಾಗಿ ಅಡಿಪಾಯದ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 29ರಿಂದ ಅಕ್ಟೋಬರ್ 28 ರವರೆಗೆ ಒಟ್ಟು 30 ದಿನಗಳ ಅವಧಿಗೆ ವ್ಯಾಸ ಕಾಲೋನಿ ನಿಲ್ದಾಣದಲ್ಲಿ ಈ ಕೆಳಗಿನ ರೈಲುಗಳ ನಿಲುಗಡೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂರು ತಿಳಿಸಿದೆ.
ಅದರಂತೆ, 07395 ಸಂಖ್ಯೆಯ ಬಳ್ಳಾರಿ – ದಾವಣಗೆರೆ ಡೆಮು ವಿಶೇಷ ರೈಲು, 56529 ಸಂಖ್ಯೆಯ ಹರಿಹರ – ಹೊಸಪೇಟೆ ಪ್ಯಾಸೆಂಜರ್ ರೈಲು, 07396 ಸಂಖ್ಯೆಯ ದಾವಣಗೆರೆ – ಬಳ್ಳಾರಿ ಡೆಮು ವಿಶೇಷ ರೈಲು ಮತ್ತು 56530 ಸಂಖ್ಯೆಯ ಹೊಸಪೇಟೆ – ಹರಿಹರ ಪ್ಯಾಸೆಂಜರ್ ರೈಲು ಈ ಅವಧಿಯಲ್ಲಿ ವ್ಯಾಸ ಕಾಲೋನಿ ನಿಲ್ದಾಣದಲ್ಲಿ ನಿಲುಗಡೆ ನಿಲುಗಡೆಗೊಳ್ಳುವುದಿಲ್ಲ ಎಂದು ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post