ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಬೆಳಗಾವಿ-ಮೀರಜ್-ಬೆಳಗಾವಿ ಮಾರ್ಗದ ಹಲವು ಪ್ಯಾಸೆಂಜರ್ ರೈಲುಗಳು ಇನ್ಮುಂದೆ ದೈನಂದಿನ ವಿಶೇಷ ಪ್ಯಾಸೆಂಜರ್ ರೈಲುಗಳಾಗಿಯೇ ಖಾಯಂ ಸಂಚರಿಸಲಿವೆ.
ಈ ಕುರಿತಂತೆ ರೈಲ್ವೆ ಮಂಡಳಿ ಅನುಮೋದನೆ ನೀಡಿದ್ದು, ಇಲಾಖೆ ಮಾಹಿತಿ ನೀಡಿದೆ.
ರೈಲು ಸಂಖ್ಯೆ 07301/07302 ಬೆಳಗಾವಿ-ಮೀರಜ್-ಬೆಳಗಾವಿ ಮತ್ತು 07303/07304 ಬೆಳಗಾವಿ-ಮೀರಜ್-ಬೆಳಗಾವಿ ಕಾಯ್ದಿರಿಸದ ದೈನಂದಿನ ವಿಶೇಷ ಪ್ಯಾಸೆಂಜರ್ ರೈಲುಗಳನ್ನು ಕಾಯಂಗೊಳ್ಳಲಿದೆ.
ರೈಲು ಸಂಖ್ಯೆ 51461 ಬೆಳಗಾವಿ-ಮೀರಜ್ ಡೈಲಿ ಪ್ಯಾಸೆಂಜರ್ ಬೆಳಗಾವಿಯಿಂದ ಬೆಳಿಗ್ಗೆ 05:45ಕ್ಕೆ ಹೊರಟು, ಅದೇ ದಿನ ಬೆಳಿಗ್ಗೆ 09:00ಕ್ಕೆ ಮೀರಜ್ ತಲುಪಲಿದೆ. ವಾಪಸ್ಸು, ರೈಲು ಸಂಖ್ಯೆ 51462 ಮೀರಜ್-ಬೆಳಗಾವಿ ಡೈಲಿ ಪ್ಯಾಸೆಂಜರ್ ಮೀರಜ್ ನಿಂದ ಬೆಳಿಗ್ಗೆ 09:55ಕ್ಕೆ ಹೊರಟು, ಅದೇ ದಿನ ಮಧ್ಯಾಹ್ನ 01:00ಕ್ಕೆ ಬೆಳಗಾವಿ ತಲುಪಲಿದೆ.

ಈ ಕಾಯಂ ಸೇವೆಗಳು ಅಕ್ಟೋಬರ್ 15ರಿಂದ ಜಾರಿಗೆ ಬರಲಿವೆ. ಈ ಮೂಲಕ ಸ್ಥಳೀಯ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗಾವಿ ಮತ್ತು ಮೀರಜ್ ನಡುವೆ ದೈನಂದಿನ ಕಾಯ್ದಿರಿಸದ ಪ್ರಯಾಣ ಸೌಲಭ್ಯವನ್ನೇ ಮುಂದುವರಿಸಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post