ಕಲ್ಪ ಮೀಡಿಯಾ ಹೌಸ್ | ಬಿಹಾರ |
ಅತ್ಯಂತ ಮಹತ್ವದ ಬೆಳವಣಿಗೆಯೊಂದು ರಾಷ್ಟ್ರರಾಜಕಾರಣದಲ್ಲಿ ನಡೆದಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್’ಡಿಎ NDA ಕೂಟಕ್ಕೆ ಲಾಭವಾಗಿ ಇಂಡಿ ಒಕ್ಕೂಟಕ್ಕೆ ಭಾರೀ ಪೆಟ್ಟು ಬೀಳುವ ಲಕ್ಷಣಗಳು ಗೋಚರಿಸುತ್ತಿವೆ.
ಹೌದು… ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟದಲ್ಲಿರುವ ಬಿಹಾರ ಸಿಎಂ ನಿತೀಶ್ ಕುಮಾರ್ Bihar CM Nitish Kumar ಅದನ್ನು ತೊರೆದು ಬಿಜೆಪಿ ನೇತೃತ್ವದ ಎನ್’ಡಿಎ ತೆಕ್ಕೆಗೆ ಮತ್ತೆ ವಾಪಾಸಾಗುವ ಎಲ್ಲ ಲಕ್ಷಣಗಳು ರಾಷ್ಟ್ರ ರಾಜಕಾರಣದಲ್ಲಿ ಕಂಡು ಬಂದಿವೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ಜೆಡಿಯು ಮುಖ್ಯಸ್ಥರು ಮೈತ್ರಿಗೆ ಮರಳಲು ಬಯಸಿದರೆ ಅವರಿಗೆ ಬಿಜೆಪಿ ಷರತ್ತು ವಿಧಿಸಿದೆ ಎಂದಿದೆ.
ಬಿಜೆಪಿ ಮೂಲಗಳ ಮಾಹಿತಿಯಂತೆ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಿ ಬಂದರೆ ಎನ್’ಡಿಎ ಒಕ್ಕೂಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂಬ ಷರತ್ತು ವಿಧಿಸಲಾಗಿದೆ ಎಂದು ಹೇಳಲಾಗಿದೆ.
ಈ ಬೆಳವಣಿಗೆಗೆ ಪೂರಕವಾಗಿ ನಿತೀಶ್ ಕುಮಾರ್ ಅವರ ನಡೆಯೂ ಸಹ ಸಾಕ್ಷೀಕರಿಸುತ್ತಿದೆ
ಸಿಎಂ ನಿತೀಶ್ ಕುಮಾರ್ ಅವರು ತಮ್ಮೆಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ಏಕಾಏಕಿ ರದ್ದು ಮಾಡಿದ್ದು, ಜೆಡಿಯುನ ಎಲ್ಲ ಶಾಸಕರನ್ನು ಪಾಟ್ನಾಗೆ ಕರೆಸಿಕೊಂಡು ರಹಸ್ಯ ಸಭೆ ನಡೆಸಿದ್ದಾರೆ.
ಇನ್ನು ಪ್ರಮುಖವಾಗಿ ರಾಹುಲ್ ಗಾಂಧಿಯ ಭೇಟಿಯಿಂದ ದೂರ ಉಳಿದಿರುವ ನಿತೀಶ್ ಕುಮಾರ್, ತಮ್ಮ ಸಂಪುಟ ಸಭೆಯನ್ನು ಕೇವಲ 25 ನಿಮಿಷದಲ್ಲಿ ಮುಗಿಸಿದ್ದಾರೆ. ಅಲ್ಲದೇ, ಸಭೆಯಲ್ಲಿ ತೇಜಸ್ವಿ ಯಾದವ್ ಯಾರೊಂದಿಗೂ ಮಾತನಾಡಿದೇ ಮೌನ ವಹಿಸಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಇದರ ನಡುವೆ ಬಿಹಾರ ಬಿಜೆಪಿ ಅಧ್ಯಕ್ಷ ಸಾಮ್ರಾಟ್ ಚೌಧರಿ ಅವರು ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಮಾತುಕತೆ ನಡೆಸಿರುವುದೂ ಸಹ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ನಡುವೆ ಅಭಿಪ್ರಾಯ ಮತ್ತು ನಿರ್ಗಮನ ಸಮೀಕ್ಷೆಗಳ ಮೂಲಕ ಚುನಾವಣೆಗಳನ್ನು ಭವಿಷ್ಯ ನುಡಿಯುವ ಜನ್ ಕಿ ಬಾತ್, ನಿತೀಶ್ ಕುಮಾರ್ ಎನ್’ಡಎಗೆ ಮರಳಲು ಸಿದ್ಧರಾಗಿದ್ದಾರೆ. ಪ್ರಸ್ತುತ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಲು ಕಾನೂನು ಆಯ್ಕೆಗಳನ್ನು ಪರಿಗಣಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಜನವರಿ 29 ರಂದು ತನ್ನ ರಾಜ್ಯವನ್ನು ಪ್ರವೇಶಿಸಿದಾಗ ನಿತೀಶ್ ಕುಮಾರ್ ಸೇರದಿರಬಹುದು ಎಂದು ಹೇಳಲಾಗಿದೆ.
ಎರಡು ವರ್ಷಗಳ ಹಿಂದೆ ಬಿಜೆಪಿಯಿಂದ ಬದಲಾದ ನಿತೀಶ್ ಕುಮಾರ್ ಭಾರತ ಒಕ್ಕೂಟದ ಪ್ರಮುಖ ವ್ಯಕ್ತಿ. ಕರ್ಪೂರಿ ಠಾಕೂರ್ ಅವರಿಗೆ ‘ಭಾರತ ರತ್ನ’ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿತೀಶ್ ಕುಮಾರ್ ಅವರು ಗುರುವಾರ ಶ್ಲಾಘಿಸಿದ್ದಾರೆ ಎಂದು ಜೆಡಿಯು ನಾಯಕ ಕೆಸಿ ತ್ಯಾಗಿ ಹೇಳಿದ್ದಾರೆ.
ಕರ್ಪೂರಿ ಠಾಕೂರ್ ಅವರು ತಮ್ಮ ಸ್ವಂತ ಮಗನಿಗೆ ಶಾಸಕ ಟಿಕೆಟ್ ನೀಡದ ರೀತಿಯನ್ನು ನಿತೀಶ್ ಕುರ್ಮಾ ಜಿ ಶ್ಲಾಘಿಸಿದರು. ಕರ್ಪೂರಿ ಠಾಕೂರ್’ಗೆ ‘ಭಾರತ ರತ್ನ’ ಪ್ರಶಸ್ತಿ ನೀಡಿದ್ದಕ್ಕಾಗಿ ಅವರು ಪ್ರಧಾನಿಯನ್ನು ಶ್ಲಾಘಿಸಿದ್ದರು.
ಪಶ್ಚಿಮ ಬಂಗಾಳದಲ್ಲಿ ಇಂಡಿ ಒಕ್ಕೂಟಕ್ಕೆ ಭಾರೀ ಹೊಡೆತ ಕೊಟ್ಟ ಟಿಎಂಸಿ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯುವುದಾಗಿ ಹೇಳಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ ಮತ್ತೊಂದು ಬರೆ ಬೀಳುವ ಸಾಧ್ಯತೆಯಿದೆ.
ಇನ್ನು, ಮಮತಾ ಬ್ಯಾನರ್ಜಿ ಹಾದಿಯನ್ನೇ ಎನ್’ಸಿಪಿಯ ಶರದ್ ಪವಾರ್ ಸಹ ಅನುಸರಿಸಲಿದ್ದಾರೆ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post