ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಬಿಹಾರದ ಕಾರ್ಮಿಕರು ತಮ್ಮ ರಾಜ್ಯಕ್ಕೆ ವಾಪಾಸ್ ಹೋಗುವುದು ಬೇಡ. ಅವರಿಗೆ ಇಲ್ಲಿಯೇ ಕೆಲಸ ನೀಡುವ ಭರವಸೆ ನೀಡಲಾಗಿದ್ದು, ಕಾರ್ಮಿಕರು ತಮ್ಮ ಪ್ರದೇಶಗಳಿಗೆ ವಾಪಾಸ್ ಬರಲು ಒಪ್ಪಿದ್ದಾರೆ ಎಂದು ಸಚಿವ ಆರ್. ಅಶೋಕ್ ಹೇಳಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ನೋಂದಣಿ ಮತ್ತು ಮುದ್ರಾಂಕದಿಂದ ಮೊದಲ ದಿನ 6 ಲಕ್ಷ ಆದಾಯ ಬಂದಿತ್ತು. ನಿನ್ನೆ 10 ಕೋಟಿ ಆದಾಯ ಬಂದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಾ ಕಾಮಗಾರಿ ಆರಂಭಕ್ಕೆ ಸಿಎಂ ಅನುಮತಿ ನೀಡಿದ್ದಾರೆ. ವಿದೇಶದಿಂದ ಬರುವ ಕನ್ನಡಿಗರಿಗೆ ಅವರವರ ಜಿಲ್ಲೆಗಳಲ್ಲಿ ಕ್ವಾರಂಟೈನ್ ಮಾಡಲು ಶಾಸಕರು ಮನವಿ ಮಾಡಿದ್ದು, ಅದೇ ರೀತಿ ಕ್ವಾರಂಟೈನ್ ಮಾಡಲಾಗುವುದು ಎಂದರು.
ಕಟ್ಟಡ ಕಾಮಗಾರಿಗೆ ಅನುಮತಿ ನೀಡಲಾಗಿದ್ದು, ಕೆಲವು ಕಡೆ ಕಟ್ಟಡ ಕಾಮಗಾರಿಗೆ ಸಂಬಂಧಿಸಿದ ಸಾಮಗ್ರಿಗಳ ಅಂಗಡಿಗಳ ತೆರವಿಗೆ ಪೋಲಿಸರು ಅನುಮತಿ ನೀಡುತ್ತಿಲ್ಲ ಎಂಬ ದೂರು ಬಂದಿದೆ. ಎಲ್ಲಾ ಎಸ್’ಪಿಗಳಿಗೂ ಕಟ್ಟಡ ಕಾಮಗಾರಿಗೆ ಸಂಬಂಧಿಸಿದ ಅಂಗಡಿಗಳ ತೆರೆಯಲು ಅನುಮತಿ ನೀಡಲು ಸೂಚನೆ ನೀಡಿದ್ದೇವೆ ಎಂದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get in Touch With Us info@kalpa.news Whatsapp: 9481252093















