ಕಲ್ಪ ಮೀಡಿಯಾ ಹೌಸ್ | ಬಿಹಾರ |
ಬಿಹಾರ ವಿಧಾನಸಭಾ ಚುನಾವಣೆಯ #Bihara Assembly Election ಮತ ಎಣಿಕೆ ಇನ್ನೂ ಮುಂದುವರೆದಿದ್ದು, ಒಂದೆಡೆ ಎನ್’ಡಿಎ #NDA ಐತಿಹಾಸಿಕ 208 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ರಾಹುಲ್ ಗಾಂಧಿ #Rahul Gandhi ನಾಯಕತ್ವದ ಕಾಂಗ್ರೆಸ್ ಕೇವಲ 1 ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬಿಹಾರದಲ್ಲಿ 61 ಕ್ಷೇತ್ರಗಳಲ್ಲಿ ಸ್ಫರ್ಧಿಸಿತ್ತು. ಮುಂಜಾನೆ ಮತ ಎಣಿಕೆ ಆರಂಭವಾದಾಗ 19 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್ ಮತ ಎಣಿಕೆ ಮುಂದುವರೆದಂತೆ, ಗಂಟೆ ಗಂಟೆಗೂ ಒಂದೊಂದೇ ಕ್ಷೇತ್ರದಲ್ಲಿ ಅಸ್ಥಿತ್ವ ಕಳೆದಕೊಳ್ಳುತ್ತಾ ಬಂದಿದೆ. ಮಧ್ಯಾಹ್ನದ 2 ಗಂಟೆ ವೇಳೆಗೆ ಸುಮಾರು 5-6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್ ಮಧ್ಯಾಹ್ನ 3.45ರ ವೇಳೆಗೆ ಕೇವಲ ಒಂದೇ ಒಂದು ಕ್ಷೇತ್ರಕ್ಕೆ ಕುಸಿದಿದೆ. ಈ ಮೂಲಕ ಬಿಹಾರದಲ್ಲಿ ತನ್ನ ಅಸ್ಥಿತ್ವವನ್ನೇ ಕಳೆದುಕೊಂಡ ಪಕ್ಷ ಕಾಂಗ್ರೆಸ್’ಗೆ ಕಂಡು ಕೇಳರಿಯದ ರೀತಿಯಲ್ಲಿ ಮುಖಭಂಗ ಅನುಭವಿಸಿದೆ.
ಇನ್ನು, ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಸಹ ಕೇವಲ 27 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿಕೊಂಡಿದ್ದು, ಅಧಿಕೃತ ಪ್ರತಿಪಕ್ಷ ಸ್ಥಾನಮಾನ ಪಡೆಯುವಷ್ಟೂ ಸಹ ಸ್ಥಾನ ಗಳಿಸುವುದು ಅನುಮಾನ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















