ಕಲ್ಪ ಮೀಡಿಯಾ ಹೌಸ್ | ಬೀರೂರು |
ಸಮತೋಲಿತ ಆಹಾರ ಸೇವನೆಯ ಪದ್ದತಿಯೇ ಉತ್ತಮ ಅರೋಗ್ಯದ ಗುಟ್ಟು ಎಂಬುದನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಡಾ.ಕೆ.ಸಿ. ಶೇಖರಪ್ಪ ಸಲಹೆ ನೀಡಿದ್ದಾರೆ.
ಬೀರೂರಿನ ಕನ್ನಡ ಸಂಘವು 67ನೆಯ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಆಹಾರ, ನಿದ್ದೆ, ನಿಯಮಿತ ವ್ಯಾಯಮ ಪ್ರತಿಯೊಬ್ಬರಿಗೂ ಅತಿ ಮುಖ್ಯವಾಗಿದೆ. ಸರಿಯಾದ ವಿಧಾನದಲ್ಲಿ ಆಹಾರ ಸೇವನೆ ಮಾಡದಿದ್ದಲ್ಲಿ ದೇಹದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಆಹಾರವನ್ನು ನಿಗದಿತ ಸಮಯಕ್ಕೆ ಸೇವಿಸಬೇಕು. ಊಟ ಮಾಡಿದ ಕೂಡಲೇ ಮಲಗುವ ಅಭ್ಯಾಸವನ್ನು ಅನೇಕರು ರೂಡಿಸಿಕೊಂಡಿರುತ್ತಾರೆ. ಈ ಅಭ್ಯಾಸವಿದ್ದರೆ ಮಧುಮೇಹ, ನಿದ್ರಾ ತೊಂದರೆ, ಅಸಿಡಿಟಿ, ಜೀರ್ಣಕ್ರಿಯೆ ಸಮಸ್ಯೆ, ತೂಕ ಹೆಚ್ಚಳ ಹೀಗೆ ಹಲವು ಗಂಭೀತ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ ಎಂದರು.
ಊಟಕ್ಕೂ ನಿದ್ದೆಗೂ ಕನಿಷ್ಠ ಮೂರು ಗಂಟೆಗಳ ಕಾಲ ಅಂತರ ಕಾಯ್ದುಕೊಳ್ಳುವುದು ಉತ್ತಮವಾದುದು. ಅಜೀರ್ಣ, ನಿದ್ರಾಹೀನತೆಯಂತಹವುಗಳಿಂದ ದೂರವಿಡುವ ಜೊತೆಗೆ ಚಯಾಪಚಯ ಕ್ರಿಯೆಯು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತದೆ. ರಾತ್ರಿ ಊಟವನ್ನು ಸಂಜೆ 7ರಿಂದ 8 ಗಂಟೆಯೊಳಗೆ ಮುಗಿಸಿ 10.30ರಿಂದ 11ಗಂಟೆಯೊಳಗೆ ಮಲಗುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು. ಆಗ ಬೆಳಗ್ಗೆ ಬೇಗ ಎಳುವ ಅಭ್ಯಾಸ ಸುಲಭವಾಗುತ್ತದೆ. ನಿಯಮಿತ ವ್ಯಾಯಾಮವನ್ನು ದಿನನಿತ್ಯ ಮಾಡುವುದರಿಂದ ಸದೃಡ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ಅಧಿಕ್ಷಕರಾದ ಡಾ.ಶಿವಮೂರ್ತಿ ಎಚ್.ಎಂ. ಮಾತನಾಡಿ, ನಮ್ಮ ಪೂರ್ವಿಕರು ಅಯಾಯ ಕಾಲಘಟ್ಟಕ್ಕೆ ಸರಿ ಹೊಂದುವAತಹ ಆಹಾರ ಪದ್ದತಿಯನ್ನು ಅಯಾಯ ಪ್ರದೇಶಕ್ಕೆ ಅನುಗುಣವಾಗಿ ರೂಡಿಸಿಕೊಂಡಿದ್ದರು. ನಾವು ವಾಸಿಸುವ ಪ್ರದೇಶದಲ್ಲಿ ಬೆಳೆಯುವ ಆಹಾರ ಸೇವನೆ ಎಂದಿಗೂ ಆರೋಗ್ಯಕ್ಕೆ ಹಿತವಾದುದು ಎಂದರು.
ಪ್ರತಿನಿತ್ಯದ ಆಹಾರದಲ್ಲಿ ತರಕಾರಿ, ಬೇಳೆ ಕಾಳುಗಳ ಪದಾರ್ಥಗಳು, ಆಯಾ ಕಾಲಮಾನಕ್ಕೆ ತಕ್ಕಂತೆ ದೊರೆಯುವ ಹಣ್ಣುಗಳು ಹಾಗೂ ಒಣಹಣ್ಣುಗಳ ನಿಯಮಿತ ಸೇವನೆ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂದರು.
ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಶಸ್ತç ಚಿಕಿತ್ಸಾ ತಜ್ಞ ಡಾ.ಬಿ.ಪಿ. ಸುರೇಶ್, ಹೃದಯ ರೋಗ ತಜ್ಞ ಡಾ.ಮೋಹನ್, ಜನರಲ್ ಮೆಡಿಸನ್ ವಿಭಾಗದ ಡಾ.ಉದಯ ಶಂಕರ್, ನೇತ್ರ ತಜ್ಞರಾದ ಡಾ.ಪಲ್ಲವಿ, ಬೀರೂರು ಕನ್ನಡ ಸಂಘದ ಅಧ್ಯಕ್ಷ ಎಚ್.ಸಿ. ವಿಶ್ವನಾಥ ಗೌಡ, ಪ್ರಧಾನ ಕಾರ್ಯದರ್ಶಿ ಸಿ.ವಿ. ನಾಗೇಂದ್ರ ಶ್ರೇಷ್ಠಿ, ಗೌರವಾಧ್ಯಕ್ಷ ಕೆ.ಬಿ. ಮಲ್ಲಿಕಾರ್ಜುನ, ಸಂಘದ ಜಿ.ಎಸ್. ಭೂಷಣ್ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post