ಕೋಲ್ಕತ್ತಾ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಿಂದ ಬಿಜೆಪಿ ಒಂದೇ ಒಂದು ಸೀಟನ್ನೂ ಸಹ ಗೆಲ್ಲುವುದಿಲ್ಲ. ಇದಕ್ಕೆ ಹೆದರಿಯೇ ಸಿಆರ್’ಪಿಎಫ್ ಯೋಧರನ್ನು ರಾಜ್ಯದಲ್ಲಿ ನಿಯೋಜಿಸಲು ಆಯೋಗವನ್ನು ಅದು ಒತ್ತಾಯಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಭವಿಷ್ಯ ನುಡಿದಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ನಮ್ಮ ರಾಜ್ಯದಲ್ಲಿ ಕೇಸರಿ ಪಕ್ಷ ಒಂದೇ ಒಂದು ಸ್ಥಾನವನ್ನೂ ಸಹ ಗೆಲ್ಲುವುದಿಲ್ಲ ಎನ್ನುವುದು ಅದಕ್ಕೂ ತಿಳಿದಿದೆ. ಅದರ ಭಯದಿಂದಲೇ ಸಿಆರ್’ಪಿಎಫ್ ಯೋಧರನ್ನು ರಾಜ್ಯದಲ್ಲಿ ನಿಯೋಜನೆ ಮಾಡಿಸಿ, ಅವರ ಮೂಲಕ ಭಯ ಹುಟ್ಟಿಸಿ ಗೆಲ್ಲಲು ನೋಡುತ್ತಿದೆ ಎಂದು ಆರೋಪಿಸಿದ್ದಾರೆ.
ಚುನಾವಣಾ ವಿಚಾರದಲ್ಲಿ ನಾವು ಪಶ್ಚಿಮ ಬಂಗಾಳ ಪೊಲೀಸರನ್ನು ನಂಬುವುದಿಲ್ಲ. ಅವರು ಚುನಾವಣಾ ಅಕ್ರಮದಲ್ಲಿ ಕೈಜೋಡಿಸುವ ಶಂಕೆಯಿದೆ. ಹೀಗಾಗಿ, ಪಶ್ಚಿಮ ಬಂಗಾಳದಲ್ಲಿ ಸಿಆರ್’ಪಿಎಫ್ ಪಡೆಗಳನ್ನು ಹೆಚ್ಚು ನಿಯೋಜಿಸಿ ಪಾರದರ್ಶಕವಾಗಿ ಚುನಾವಣೆ ನಡೆಯುವಂತೆ ಮಾಡಿ ಎಂದು ಬಿಜೆಪಿ ಕೇಂದ್ರ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ ಮಮತಾ ಪ್ರತಿಕ್ರಿಯೆ ನೀಡಿದ್ದಾರೆ.
Discussion about this post