ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ತಮ್ಮ ಜನ್ಮ ದಿನವನ್ನು ಶಾರದಾದೇವಿ ಅಂಧರ ವಿಕಾಸ ಶಾಲೆ ಮಕ್ಕಳೊಂದಿಗೆ ತಾವೂ ಸಹ ಮಕ್ಕಳಂತಾಗಿ ಬೆರೆತು ಆಚರಿಸಿಕೊಳ್ಳುವ ಮೂಲಕ ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್. ದತ್ತಾತ್ರಿ ಮಾದರಿಯಾಗಿದ್ದಾರೆ.
ಇಂದು ಮುಂಜಾನೆ ಶಾಲೆಗೆ ತೆರಳಿದ ದತ್ತಾತ್ರಿ ದಂಪತಿಗಳು ಮಕ್ಕಳೊಂದಿಗೆ ಬೆರೆತು ಪ್ರಾರ್ಥನೆ ಸಲ್ಲಿಸಿ, ಉಭಯ ಕುಶಲೋಪರಿ ವಿಚಾರಿಸಿದರು. ವಿದ್ಯಾರ್ಥಿಗಳಿಗೆ ಉಪಹಾರ ಹಾಗೂ ಸಿಹಿ ಹಂಚಿ ಸಂಭ್ರಮಿಸಿದರು.
ಸಂಸ್ಥೆಯ ವತಿಯಿಂದ ದತ್ತಾತ್ರಿ ಅವರಿಗೆ ಶುಭ ಹಾರೈಸಿ, ಹರಸಲಾಯಿತು.
ದತ್ತಾತ್ರಿ ಅವರ ಪತ್ನಿ ರಂಜಿನಿ ದತ್ತಾತ್ರಿ, ಪ್ರಮುಖರಾದ ಸುಹಾಸ್ ಶಾಸ್ತ್ರಿ, ರಾಜಾರಾಮ್ ಭಟ್, ವಿಶ್ವಾಸ್, ದರ್ಶನ್, ಡಾ.ಗೌತಮ್ ಸೇರಿದಂತೆ ಅಭಿಮಾನಿಗಳು ಇದ್ದರು.
ಕಾರ್ಯಕರ್ತರು, ಅಭಿಮಾನಿಗಳಿಂದ ಶುಭ ಹಾರೈಕೆ
ತಮ್ಮ ನೆಚ್ಚಿನ ನಾಯಕನ ಜನ್ಮದಿನಕ್ಕೆ ಶುಭ ಕೋರಲು ದತ್ತಾತ್ರಿ ಅವರ ನಿವಾಸಕ್ಕೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಇಂದು ಮುಂಜಾನೆಯಿಂದಲೇ ಆಗಮಿಸುತ್ತಿದ್ದಾರೆ.
ಅರ್ಚಕ ವೃಂದದವರು ದತ್ತಾತ್ರಿ ನಿವಾಸಕ್ಕೆ ಆಗಮಿಸಿ ವೇದೋಕ್ತ ಮಂತ್ರ ಪಠಿಸಿ, ಆರ್ಶೀವದಿಸಿದರು.
Get in Touch With Us info@kalpa.news Whatsapp: 9481252093
















