ದುರ್ಗ್: ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಓರ್ವ ಮಾನಸಿಕ ದುರ್ಬಲ ವ್ಯಕ್ತಿ ಎಂದು ಛತ್ತೀಸ್‌ಘಡದ ದುರ್ಗ್ ಬಿಜೆಪಿ ಸಾಂಸದೆ ಸರೋಜ್ ಪಾಂಡೆ ಕುಹಕವಾಡಿದ್ದಾರೆ.
ಕೊಕಾಕೋಲಾ ವಿಚಾರದಲ್ಲಿ ರಾಹುಲ್ ನೀಡಿದ್ದ ಹೇಳಿಕೆಯ ಹಿನ್ನೆಲೆಯಲ್ಲಿ ಮಾತನಾಡಿರುವ ಸರೋಜ್, ಇಂತಹ ವ್ಯಕ್ತಿಗಳೂ ಇರುತ್ತಾರೆ ಎನ್ನುವುದು ಆಶ್ಚರ್ಯಕರ ವಿಚಾರ. ಅವರು ಖಂಡಿತವಾಗಿಯೂ ಕಲಿಯಲು ಯತ್ನಿಸುತ್ತಾರೆ, ಅವರಿಗೆ ವಯಸ್ಸೂ ಸಹ ಇದೆ. ಆದರೆ, 40 ವರ್ಷದ ನಂತರ ಕಲಿಯುವುದು ತಲೆಗೆ ಹತ್ತುವುದಿಲ್ಲ. ಇಂತಹ ವ್ಯಕ್ತಿಗಳಿಗೆ ಮಂದ ಬುದ್ದಿಯವರು ಅಂದರೆ ಮಾನಸಿಕ ದುರ್ಬಲವಾಗಿರುತ್ತಾರೆ ಎಂದಿದ್ದಾರೆ.
ಇನ್ನು ರಾಹುಲ್‌ಗಾಂಧಿ ಕುರಿತಾಗಿ ಇಂತಹ ಹೇಳಿಕೆ ನೀಡಿರುವ ಸಾಂಸದೆ ವಿರುದ್ಧ ಕಾಂಗ್ರೆಸ್ ಕಿಡಿ ಕಾರಿದ್ದು, ಬಹಿರಂಗ ಕ್ಷಮೆ ಯಾಚಿಸಬೇಕು ಎಂದಿದೆ.
Discussion about this post