ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಈಗಾಗಲೇ ಹಲವು ವಿವಾದಗಳಲ್ಲಿ ಮುಳುಗೇಳುತ್ತಿರುವ ಕನ್ನಡ ಚಿತ್ರರಂಗದ ಲಂಗೋಟಿಮ್ಯಾನ್ ಎಂಬ ಚಿತ್ರದ ವಿರುದ್ಧ ಬ್ರಾಹ್ಮಣ ಸಮಾಜ ಆಕ್ರೋಶ ವ್ಯಕ್ತಪಡಿಸಿದ್ದು, ಚಿತ್ರವನ್ನು ಬಿಡುಗಡೆ ಮಾಡದಂತೆ ಎಚ್ಚರಿಕೆ ನೀಡಿದೆ.
ಈ ಕುರಿತಂತೆ ರಾಜ್ಯ ಬ್ರಾಹ್ಮಣ ಅರ್ಚಕರ ಹಾಗೂ ಪುರೋಹಿತರ ಪರಿಷತ್ ಕಾರ್ಯಾಧ್ಯಕ್ಷ ರಾಘವೇಂದ್ರ ಭಟ್ ಮಾತನಾಡಿದ್ದು, ವಿಪ್ರ ಸಮುದಾಯದ ಪರವಾಗಿ ಆಕ್ರೋಶ ಹೊರ ಹಾಕಿದ್ದಾರೆ.
ಪ್ರತಿಯೊಂದು ಧರ್ಮದಲ್ಲೂ ಅವರದ್ದೇ ಆದ ವಸ್ತ್ರ ಸಂಹಿತೆ ಇರುತ್ತದೆ. ಯಾವುದೇ ಧರ್ಮದ ಆಚರಣೆ ಹಾಗೂ ವಸ್ತ್ರ ಸಂಹಿತೆಯನ್ನು ಚಿತ್ರಗಳಲ್ಲಿ ಹಾಸ್ಯಮಯವಾಗಿ ತೋರಿಸುವುದು ಹಾಗೂ ಅದರ ಹೆಸರನ್ನು ಇರಿಸುವುದು ತಪ್ಪು. ಇದನ್ನು ನಾವು ವಿರೋಧಿಸುತ್ತೇವೆ ಎಂದರು.

ಎಂದೂ ನಮ್ಮ ಧರ್ಮದ ಯಾವುದೇ ಆಚರಣೆ ಹಾಗೂ ಸಂಪ್ರದಾಯಗಳನ್ನು ಹಾಸ್ಯವನ್ನಾಗಿ ತೋರಿಸುವುದು ಹಾಸ್ಯವಾಗುವುದಿಲ್ಲ. ಬದಲಾಗಿ ಧರ್ಮವಿರೋಧಿಯಾಗುತ್ತದೆ ಎಂದರು.
ಈ ಹೆಸರಿನ ಚಿತ್ರ ಯಾವುದೇ ಕಾರಣಕ್ಕೂ ಬಿಡುಗಡೆಯಾಗಬಾರದು. ಒಂದು ವೇಳೆ ಬಿಡುಗಡೆಯಾದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post