ನವದೆಹಲಿ: ಲೋಕಸಭಾ ಚುನಾವಣೆಯಲ್ಲಿನ ಅಕ್ರಮಗಳನ್ನು ಬಯಲಿಗೆಳೆಯಲು ಪಣತೊಟ್ಟಿರುವ ಚುನಾವಣಾ ಆಯೋಗ ಈವರೆಗೂ ಬರೋಬ್ಬರಿ 2626 ಕೋಟಿ ರೂ. ಮೊತ್ತದ ಹಣದ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಚುನಾವಣಾ ಆಯೋಗ, ಚುನಾವಣೆ ಘೋಷಣೆಯಾದ ದಿನದಿಂದ ಇಂದಿನವರೆಗೂ ಒಟ್ಟು 607 ಕೋಟಿ ರೂ. ಹಣ, 198 ಕೋಟಿ ರೂ. ಮೊತ್ತದ ಅಕ್ರಮ ಮಧ್ಯ, 1091 ಕೋಟಿ ರೂ. ಮೊತ್ತದ ಡ್ರಗ್ಸ್ ಹಾಗೂ ನಾರ್ಕೋಟಿಕ್ಸ್, 486 ಕೋಟಿ ರೂ. ಮೊತ್ತದ ಲೋಹದ ವಸ್ತುಗಳು ಹಾಗೂ 48 ಕೋಟಿ ರೂ. ಮೊತ್ತದ ಇತರೆ ಅಕ್ರಮ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದಿದೆ.
ಒಟ್ಟಾರೆಯಾಗಿ 2626 ಕೋಟಿ ರೂ. ಮೊತ್ತ ಇದಾಗಿದ್ದು, ಹಲವು ಚುನಾವಣಾ ಅಕ್ರಮಗಳನ್ನು ಬಯಲಿಗೆಳೆದಿದೆ.
ದೇಶದಲ್ಲಿ ಚುನಾವಣಾ ಪ್ರಕ್ರಿಯೆಯು ಶಾಂತಿಯುತ, ನ್ಯಾಯೋಚಿತ ಮತ್ತು ಯಾವುದೇ ರಾಜಕೀಯ ನಾಯಕ ಅಥವಾ ಪಕ್ಷವು ಅನಪೇಕ್ಷಿತ ಪ್ರಯೋಜನವನ್ನು ಪಡೆಯುವುದಿಲ್ಲ ಎಂದು ಖಾತರಿಪಡಿಸುವಲ್ಲಿ ಇದು ಜಾಗರೂಕ ಮತ್ತು ಬದ್ದವಾಗಿದೆ ಎಂದು ಆಯೋಗ ಹೇಳಿದೆ.
Discussion about this post