ಯುಕೆ: ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಸುರಕ್ಷಿತತೆ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸುತ್ತಿರುವ ಬೆನ್ನಲ್ಲೇ, ಯುನೈಟೆಡ್ ಕಿಂಗ್’ಡಮ್’ನಲ್ಲಿ ಭಾರತೀಯ ಮೂಲದ ವೈದ್ಯೆಯೊಬ್ಬರು ಕಣ್ಮರೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರದ ನಾಗ್’ಪುರ ಮೂಲದ ಉಮಾ ಕುಲಕರ್ಣಿ(42) ಎಪ್ರಿಲ್ 3ರಿಂದ ಕಾಣೆಯಾಗಿದ್ದು, ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಬ್ರಿಸ್ತೋಲ್ ನಾರ್ಥ್ ಸಮ್’ರೆಸ್ಟ್ ಪ್ರದೇಶದಲ್ಲಿ ಕಾಣೆಯಾಗಿರುವ ಮಾಹಿತಿ ಪ್ರಕಟಿಸಿದ್ದಾರೆ.
Discussion about this post