ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ 16 ಸಾವಿರ ಗಡಿಯತ್ತ ತಲುಪುತ್ತಿದ್ದು, ಇಂದು ಮುಂಜಾನೆಯವರೆಗೂ ಬಲಿಯಾದವರ ಸಂಖ್ಯೆ 507ಕ್ಕೇರಿದೆ.
ಇಂದು ಮುಂಜಾನೆ 9 ಗಂಟೆಯ ವರದಿಯಂತೆ ದೇಶದಲ್ಲಿ ಸೋಂಕಿತರ ಸಂಖ್ಯೆ 15,707 ಆಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 1329 ಹೊಸ ಪ್ರಕರಣಗಳು ದಾಖಲಾಗಿವೆ. 27 ಮಂದಿ ಬಲಿಯಾಗಿದ್ದು, 239 ಮಂದಿ ಗುಣಮುಖರಾಗಿದ್ದಾರೆ.
ಈ ಕುರಿತಂತೆ ಮಾಹಿತಿ ಪ್ರಕಟಿಸಿರುವ ಕೇಂದ್ರ ಆರೋಗ್ಯ ಇಲಾಖೆ, ಸೋಂಕಿಗೆ ಬಲಿಯಾದವರ ಸಂಖ್ಯೆ ಶೇಖಡಾವಾರು 3.3 ಆಗಿದೆ. ಸಾವಿಗೀಡಾಡವರಲ್ಲಿ ಶೇ.14.4ರಷ್ಟು ಮಂದಿ 0 ರಿಂದ 45 ನಡುವಿನ ವಯಸ್ಸಿನರು, ಶೇ.10.3ರಷ್ಟು ಮಂದಿ 45 ರಿಂದ 60 ವರ್ಷದ ನಡುವಿನವರು, ಶೇ.33.1ರಷ್ಟು ಮಂದಿ 6.-75 ವರ್ಷದ ನಡುವಿನವರು ಹಾಗೂ ಶೇ.42.2ರಷ್ಟು ಮಂದಿ 75 ವರ್ಷಕ್ಕಿಂತಲೂ ಹೆಚ್ಚಿನವರಾಗಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post