ನವದೆಹಲಿ: ದೇಶದ ಮೊದಲ ಲೋಕಪಾಲ್ ಆಗಿ ಜಸ್ಟಿಸ್ ಪಿನಾಕಿಚಂದ್ರ ಘೋಸ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಇನ್ನು, ಜಸ್ಟಿಸ್ ದಿಲೀಪ್ ಬಿ ಬೋಸ್ಲೆ, ಜಸ್ಟಿಸ್ ಪಿ.ಕೆ. ಮೊಹಂತಿ, ಜಸ್ಟಿಸ್ ಅಭಿಲಾಶ ಕುಮಾರಿ ಹಾಗೂ ಜಸ್ಟಿಸ್ ಎ.ಕೆ. ತ್ರಿಪಾಟಿ ಅವರನ್ನು ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಅಲ್ಲದೇ, ದಿನೇಶ್ ಕುಮಾರ್ ಜೈನ್, ಅರ್ಚನಾ ರಾಮಸುಂದರ್, ಮಹೇಂದರ್ ಸಿಂಗ್ ಮತ್ತು ಡಾ. ಐ.ಪಿ ಗೌತಮ್ ಅವರುಗಳನ್ನು ಸದಸ್ಯರನ್ನಾಗಿ ರಾಷ್ಟ್ರಪತಿಗಳು ನೇಮಕ ಮಾಡಿದ್ದಾರೆ.
ಲೋಕಪಾಲ್ ಕಾಯಿದೆ ಜನವರಿ 16, 2014 ರಂದು ಜಾರಿಗೆ ಬಂದ ಬಳಿಕ ಜಸ್ಟಿಸ್ ಪಿ.ಸಿ. ಘೋಸ್ ನೇಮಕಾತಿಗೆ ಸುಮಾರು ಐದು ವರ್ಷಗಳ ಕಾಲ ಹಿಡಿದಿದೆ.
2017 ರ ಜೂನ್’ನಿಂದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್’ಎಚ್’ಆರ್’ಸಿ) ಸದಸ್ಯರಾಗಿದ್ದ ಜಸ್ಟೀಸ್ ಘೋಸ್(67), ಮೇ 27, 2017 ರಂದು ಸುಪ್ರೀಂ ಕೋರ್ಟ್’ನಿಂದ ನಿವೃತ್ತರಾದರು. ಮಾರ್ಚ್ 8, 2013 ರಂದು ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡಿದ್ದರು.

















