ಮುಂಬೈ: ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ದೇಶದಾದ್ಯಂತ ಮೋದಿ ಸುನಾಮಿ ಅಬ್ಬರಕ್ಕೆ ಕಾಂಗ್ರೆಸ್ ಕೊಚ್ಚಿ ಹೋಗುತ್ತಿದ್ದರೆ, ಇನ್ನೊಂದೆಡೆ ಮುಂಬೈ ಶೇರು ಮಾರುಕಟ್ಟೆ ಗಗನಕ್ಕೇರಿದೆ.
ಎನ್’ಡಿಎ ಮೈತ್ರಿಕೂಟ ಸುಮಾರು 335 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡ ಪರಿಣಾಮ ಶೇರು ಪೇಟೆ ಸುಮಾರು 900 ಅಂಕಗಳ ಜಿಗಿತ ಕಂಡಿದೆ.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ) ನಿಫ್ಟಿ ಸೂಚ್ಯಂಕದಲ್ಲಿ 208 ಏರಿಕೆ ಕಂಡಿದ್ದು 11,945.90ಕ್ಕೆ ಏರಿಕೆ ಕಂಡಿದೆ. ಇನ್ನು ಬಿಎಸ್‌ಇ ಸೆನ್ಸೆಕ್ಸ್ ನಲ್ಲಿ 724 ಅಂಕ ಏರಿಕೆಯೊಂದಿಗೆ 39,835.17ಕ್ಕೆ ಏರಿಕೆ ಕಂಡಿದೆ.
ಡಾಲರ್ ಎದುರು ರೂಪಾಯಿ ಇಂದು 26 ಪೈಸೆಗಳ ಏರಿಕೆಯನ್ನು ದಾಖಲಿಸಿ 69.40 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದು ಬೆಳಗ್ಗೆ 10.30ರ ಸುಮಾರಿಗೆ ಸೆನ್ಸೆಕ್ಸ್ 835.94 ಅಂಕಗಳ ಏರಿಕೆಯನ್ನು ಕಾಯ್ದುಕೊಂಡು 39,946.15 ಅಂಕಗಳ ಮಟ್ಟದಲ್ಲೂ ನಿಫ್ಟಿ 244.10 ಅಂಕಗಳ ಮುನ್ನಡೆಯೊಂದಿಗೆ 11,982.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
Discussion about this post