ಕಲ್ಪ ಮೀಡಿಯಾ ಹೌಸ್ | ಅಹಮದಾಬಾದ್ |
ಇಡಿಯ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಅಹಮದಾಬಾದ್’ನಲ್ಲಿ #Ahmedabad 2008ರಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ #BombBlast ಪ್ರಕರಣಕ್ಕೆ ಸಂಬಂಧಿಸಿದಂತೆ 38 ಅಪರಾಧಿಗಳಿಗೆ ಮರಣ ದಂಡನೆ ಹಾಗೂ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಪ್ರಕರಣ ಕುರಿತಂತೆ ವಿಶೇಷ ನ್ಯಾಯಾಲಯದ #SpecialCourt ನ್ಯಾಯಾಧೀಶರಾದ ಎ.ಆರ್. ಪಟೇಲ್ ಅವರು ಶಿಕ್ಷೆ ಪ್ರಮಾಣದ ಆದೇಶ ಪ್ರಕಟಿಸಿದ್ದು, 38 ಮಂದಿ ಅಪರಾಧಿಗಳಿಗೆ ವಿಶೇಷ ನ್ಯಾಯಾಲಯ ಮರಣ ದಂಡನೆ #DeathSentence ಹಾಗೂ ಇನ್ನಿತರ 11 ಮಂದಿ ಅಪರಾಧಿಗಳಿಗೆ ಕಾನೂನುಬಾಹಿರ ಚಟುವಟಿಕೆ ನಿಯಮಗಳಡಿ ಹಾಗೂ ಭಾರತೀಯ ದಂಡ ಸಂಹಿತೆಯ ಕಲಂ 302ರ ಅಡಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
Also Read: ಈಶ್ವರಪ್ಪ ವಿರುದ್ಧ ಸುಳ್ಳು ಆರೋಪಿಸಿದ ಕಾಂಗ್ರೆಸ್ ಶಾಸಕರ ಸ್ಥಾನ ರದ್ದುಪಡಿಸಲು ಆಗ್ರಹ
ಫೆ. 8ರಂದು ವಿಶೇಷ ನ್ಯಾಯಾಲಯ 78 ಆರೋಪಿಗಳ ಪೈಕಿ 49 ಮಂದಿ ಅಪರಾಧಿಗಳೆಂದು ವಿಶೇಷ ನ್ಯಾಯಾಲಯ #Court ಘೋಷಿಸಿತ್ತು.
ಪ್ರಕರಣದ ಏಕೈಕ ಆರೋಪಿ ಉಸ್ಮಾನ್ ಅಗರ್ಬತ್ತಿ ವಾಲಾ ಶಸ್ತ್ರಾಸ್ತ್ರ ಕಾಯ್ದೆಯಡಿ ಅಪರಾಧಿಯಾಗಿದ್ದು, ಈತನಿಗೂ ಜೀವಾವಧಿ ಸೆರೆವಾಸ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದಲ್ಲಿ 49 ಅಪರಾಧಿಗಳು ಎಂದು ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ಈ ಎಲ್ಲ ಆರೋಪಿಗಳಿಗೆ 2.85 ಲಕ್ಷ ದಂಡ ವಿಧಿಸಿದೆ. ಶಸ್ತ್ರಾಸ್ತ್ರ ಕಾಯ್ದೆಯಡಿ ಅಪರಾಧಿಯಾಗಿರುವ ಉಸ್ಮಾನ್’ಗೆ ಹೆಚ್ಚುವರಿಯಾಗಿ 2.88 ಲಕ್ಷ ದಂಡ ವಿಧಿಸಲಾಗಿದೆ.
ಸರಣಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಕುಟುಂಬ ಸದಸ್ಯರಿಗೆ 1 ಲಕ್ಷ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ಹಾಗೂ ಸಣ್ಣಪುಟ್ಟ ಗಾಯಗೊಂಡವರಿಗೆ 25 ಸಾವಿರ ರೂ. ಪರಿಹಾರ ನೀಡಬೇಕೆಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಲಾಗಿದೆ.
2008ರ ಜುಲೈ 26ರಂದು ಅಹಮದಾಬಾದ್ ನಗರದ ವಿವಿಧೆಡೆ 22 ಬಾಂಬ್’ಗಳು #2008_serial_bomb_blasts_in_Ahmedabad ಸ್ಫೋಟಗೊಂಡಿದ್ದವು. ನರೋಡಾದ ಬಸ್ ನಿಲ್ದಾಣದಲ್ಲಿ ನಗರ ಸಾರಿಗೆ ಸಂಸ್ಥೆ ಬಸ್ ಹಾಗೂ ಸೈಕಲ್’ಗಳಲ್ಲಿ ಬಾಂಬ್’ಗಳನ್ನು ಇರಿಸಿ ಸ್ಪೋಟಿಸಲಾಗಿತ್ತು. ಘಟನೆಯಲ್ಲಿ 56 ಮಂದಿ ಅಮಾಯಕರ ಮಾರಣ ಹೋಮ ನಡೆದಿತ್ತು. ಸುಮಾರು 200 ಮಂದಿ ವಿಧ್ವಂಸಕ ಕೃತ್ಯದಲ್ಲಿ ಗಾಯಗೊಂಡಿದ್ದರು. ಈ ದಾಳಿಯ ಹೊಣೆಯನ್ನು ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಹೊತ್ತುಕೊಂಡಿತ್ತು.
Also Read: ಮಂತ್ರಿ ರಾಜೀನಾಮೆ ವಿಷಯದಲ್ಲಿ ಕಾಂಗ್ರೆಸ್ ಪ್ರತಿಷ್ಠೆಗೆ ಬಿದ್ದು ಕಲಾಪ ಹಾಳು ಮಾಡುತ್ತಿದೆ : ಹೆಚ್‌ಡಿಕೆ
ಈ ವಿಧ್ವಂಸಕ ಕೃತ್ಯ ನಡೆದು 14 ವರ್ಷಗಳ ನಂತರ ವಿಶೇಷ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದು ಒಟ್ಟು 78 ಮಂದಿಯನ್ನು ವಿಚಾರಣೆಗೆ ಗುರಿಪಡಿಸಲಾಗಿತ್ತು. ಅಯಾಜ್ ಸಯೀದ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಅಪ್ರೂವರ್ ಆಗಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post