ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚೆನ್ನೈ: ಇಡಿಯ ವಿಶ್ವದ ಚಿತ್ರರಂಗದ ದಂತಕತೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಕೋಟ್ಯಂತರ ಅಭಿಮಾನಿಗಳನ್ನು ಅಗಲಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ.
ಕೊರೋನಾದಿಂದಾಗಿ ಆಗಸ್ಟ್ 5ರಂದು ಆಸ್ಪತ್ರೆ ಸೇರಿದ್ದ ಅವರು ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ.
ಆಸ್ಪತ್ರೆಗೆ ಸೇರುವ ಮುನ್ನ ತಮಗೆ ಕೊರೋನಾ ಪಾಸಿಟಿವ್ ಬಂದ ವಿಚಾರವನ್ನು ಫೇಸ್ ಬುಕ್ ಮೂಲಕ ಹಂಚಿಕೊಂಡಿದ್ದರು.
https://www.facebook.com/SPB/posts/3346069692117514
ನನ್ನ ಸ್ನೇಹಿತರೆಲ್ಲಾ ಕರೆ ಮಾಡುತ್ತಿದ್ದಾರೆ. ಆದರೆ ಯಾರೂ ಕರೆ ಮಾಡುವುದು ಬೇಡ. ನಾನು ಆರಾಮಾಗುತ್ತೇನೆ. ಹಾಗಾಗಿ ಆಸ್ಪತ್ರೆಗೆ ಬಂದಿದ್ದೇನೆ. ಆರೋಗ್ಯದ ಕಡೆ ಗಮನ ಕೊಡಲೆಂದು ಇಲ್ಲಿಗೆ ಬಂದಿದ್ದೇನೆ. ಎಲ್ಲರ ಕರೆಗಳನ್ನು ಸ್ವೀಕರಿಸಲು ನನಗೆ ಸಾಧ್ಯವಾಗದೇ ಇರಬಹುದು. ನಾನು ಇನ್ನೆರಡು ದಿನಗಳಲ್ಲಿ ಆರೋಗ್ಯವಾಗುತ್ತೇನೆ ಎಂದು ಎಸ್‌ಪಿಬಿ ಹೇಳಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post