ಕಲ್ಪ ಮೀಡಿಯಾ ಹೌಸ್ | ಕೋಲ್ಕತ್ತಾ |
ರಾಮಕೃಷ್ಣ ಮಿಷನ್ #RamakrishnaMission ಅಧ್ಯಕ್ಷರಾದ ಸ್ವಾಮಿ ಸ್ಮರಣಾನಂದ(95) ಅವರು ಮಂಗಳವಾರ ರಾತ್ರಿ ಅಸ್ತಂಗತರಾಗಿದ್ದಾರೆ.
ಮೂತ್ರನಾಳ ಸೋಂಕಿನ ಹಿನ್ನೆಲೆಯಲ್ಲಿ ಅವರನ್ನು ರಾಮಕೃಷ್ಣ ಮಿಷನ್ ಸೇವಾ ಪ್ರತಿಷ್ಠಾನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಉಸಿರಾಟದ ತೊಂದರೆಯೂ ಸಹ ಬಾಧಿಸಿದ ಹಿನ್ನೆಲೆಯಲ್ಲಿ ವೆಂಟಿಲೇಟರ್ ಸಹಾಯದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮಂಗಳವಾರ ರಾತ್ರಿ 8.14 ಕ್ಕೆ ಮಹಾಸಮಾಧಿಯನ್ನು ಪಡೆದರು ಎಂದು ರಾಮಕೃಷ್ಣ ಮಿಷನ್ ಎಂದು ಘೋಷಣೆ ಮಾಡಿದೆ.
Also read: ಕೈಯಲ್ಲಿ ಅದೆಷ್ಟು ಶಕ್ತಿ ಇದೆ ತೋರಿಸಿಬಿಡಿ ಒಂದ್ಸಾರಿ | ಕಾಂಗ್ರೆಸ್ ನಾಯಕರಿಗೆ ಪ್ರಹ್ಲಾದ ಜೋಶಿ ಸವಾಲು
ಸ್ವಾಮಿ ಸ್ಮರಣಾನಂದ ಅವರು 2017ರಿಂದ ರಾಮಕೃಷ್ಣ ಮಠ ಹಾಗೂ ಮಿಷನ್’ನ 16ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
Also read: ಸಂಸ್ಕೃತ ಭಾಷೆ ಪ್ರಚಾರಕ್ಕಾಗಿ ಸುಸಂಸ್ಕೃತ ಯುವಕರ ಬೈಕ್ ರ‍್ಯಾಲಿ
ಪ್ರಧಾನಿ ಮೋದಿ ಕಂಬನಿ
ಸ್ವಾಮಿ ಸ್ಮರಣಾನಂದ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದು, ಸಂತಾಪು ಸೂಚಿಸಿದ್ದಾರೆ.
ಈ ಕುರಿತಂತೆ ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಸ್ವಾಮಿ ಸ್ಮರನಾನಂದರೊಂದಿಗಿನ ಸಂವಾದವನ್ನು ನೆನಪಿಸಿಕೊಂಡಿದ್ದಾರೆ. ಅವರ ಸಹಾನುಭೂತಿ ಮತ್ತು ಬುದ್ಧಿವಂತಿಕೆಯ ಮೂಲಕ ಜನರ ಜೀವನದ ಮೇಲೆ ಸನ್ಯಾಸಿಗಳ ಆಳವಾದ ಪ್ರಭಾವವನ್ನು ಎತ್ತಿ ತೋರಿಸಿದರು. ಅವರು ಅಸಂಖ್ಯಾತ ಹೃದಯಗಳು ಮತ್ತು ಮನಸ್ಸಿನ ಮೇಲೆ ಅಳಿಸಲಾಗದ ಗುರುತು ಬಿಟ್ಟು ತೆರಳಿದ್ದಾರೆ ಎಂದಿದ್ದಾರೆ.
Srimat Swami Smaranananda ji Maharaj, the revered President of Ramakrishna Math and Ramakrishna Mission dedicated his life to spirituality and service. He left an indelible mark on countless hearts and minds. His compassion and wisdom will continue to inspire generations.
I had… pic.twitter.com/lK1mYKbKQt
— Narendra Modi (@narendramodi) March 26, 2024
ಇನ್ನು, ಸ್ವಾಮಿಯವರ ನಿಧನಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ಸಹ ಸಂತಾಪ ಸೂಚಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post