ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಇವಿಎಂ #EVM ಮೂಲಕ ಚುನಾವಣೆಯ ನಡೆಸುವುದರಲ್ಲಿ ಯಾವುದೇ ದೋಷ ಕಂಡುಬಂದಿಲ್ಲ. ಹೀಗಾಗಿ, ಬ್ಯಾಲೆಟ್ ವೋಟಿಂಗ್ ನಡೆಸುವುದು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ #SupremeCourt ಮಹತ್ವದ ಆದೇಶ ನೀಡಿದ್ದು, ಈ ಮೂಲಕ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದವರಿಗೆ ಚಾಟಿ ಬೀಸಿದೆ.
ಇವಿಎಂ ಬಳಕೆ ಬದಲಾಗಿ ಬ್ಯಾಲೆಟ್ ವೋಟಿಂಗ್ ಮೂಲಕ ಚುನಾವಣೆ ನಡೆಸಬೇಕು ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾಮ್ಸ್ ಎಂಬ ಎನ್’ಜಿಒ #NGO ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿರುವ ನ್ಯಾಯಾಲಯ, ಇವಿಎಂ ಮೂಲಕವೇ ಭಾರತದಲ್ಲಿ ಚುನಾವಣೆ ನಡೆಸಬೇಕು ಎಂದು ಸೂಚನೆ ನೀಡಿದೆ.

ಇವಿಎಂ ಬಗ್ಗೆ ನಿಮಗೆ ವೈಯಕ್ತಿಕವಾಗಿ ಅನುಮಾನಗಳಿವೆ ಎಂಬ ಕಾರಣಕ್ಕಾಗಿ ಇಡೀ ವ್ಯವಸ್ಥೆಯನ್ನೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ಮತಯಂತ್ರಗಳ ಮೇಲಿನ ವಿಶ್ವಾಸವನ್ನು ಕುಂದಿಸುವ ಅನಾವಶ್ಯಕ ಪ್ರಯತ್ನಗಳನ್ನು ಮಾಡಬೇಡಿ ಎಂದು ಅರ್ಜಿ ಸಲ್ಲಿಸಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ನ್ಯಾಯಾಲಯ ಛೀಮಾರಿ ಹಾಕಿದೆ.

ಮುಂದುವರೆದ ದೇಶಗಳಲ್ಲಿಯೂ ಬ್ಯಾಲೆಟ್ ವೋಟಿಂಗ್ #BallotVoting ವ್ಯವಸ್ಥೆ ಇದೆ ಎಂಬ ಪ್ರಶಾಂತ್ ಭೂಷಣ್ #PrashantBhushan ವಾದಕ್ಕೆ ಚಾಟಿ ಬೀಸಿದ ನ್ಯಾಯಾಲಯ, ಬೇರೆ ದೇಶಗಳಿಗೂ ಭಾರತಕ್ಕೂ ಹೋಲಿಕೆ ಮಾಡಬೇಡಿ. ಪಶ್ಚಿಮ ಬಂಗಾಳ ರಾಜ್ಯದ ಜನಸಂಖ್ಯೆ ಎಷ್ಟೋ ದೇಶಗಳ ಒಟ್ಟು ಜನಸಂಖ್ಯೆಗೆ ಸಮನಾಗಿದೆ. ಅಲ್ಲಿನಂತೆ ಇಲ್ಲಿನ ನಡೆಸಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಅತ್ಯುತ್ತಮ ಚುನಾವಣಾ ವ್ಯವಸ್ಥೆ ಜಾರಿಯಲ್ಲಿದ್ದು, ಇದನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಜಾ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post