ನವದೆಹಲಿ: ರಾಫೆಲ್ ಡೀಲ್ ಪ್ರಕರಣದಲ್ಲಿ ಕೇಂದ್ರದ ವಿರುದ್ಧ ಅರ್ಜಿದಾರರು ಸಲ್ಲಿಸಿರುವ ಪೂರಕ ದಾಖಲೆಗಳು ಅತ್ಯಂತ ಸೂಕ್ಷ್ಮವಾಗಿದ್ದು, ಇದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರಲಿದೆ. ಇದರು ದೇಶದ ಯುದ್ಧ ಸಾಮರ್ಥ್ಯದ ರಹಸ್ಯವನ್ನು ತೆರೆದಿಡಲಿದೆ ಎಂದು ಕೇಂದ್ರ ಹೇಳಿದೆ.
ಈ ಕುರಿತಂತೆ ರಕ್ಷಣಾ ಇಲಾಖೆ ಇಂದು ಸುಪ್ರೀಂ ಕೋರ್ಟ್’ಗೆ ಇಂದು ಅಫಿಡವಿಟ್ ಸಲ್ಲಿಸಿದ್ದು, ಸಲ್ಲಿಕೆಯಾಗಿರುವ ದಾಖಲೆ ಅತ್ಯಂತ ಸೂಕ್ಷ್ಮವಾದುದಾಗಿದೆ. ಇದರ ಬಹಿರಂಗ ಫ್ರಾನ್ಸ್ ನಿರ್ಮಿತ ಕಾಂಬೋಟ್ ಏರ್’ಕ್ರಾಫ್ಟ್’ನ ಸಾಮರ್ಥ್ಯದ ರಹಸ್ಯವನ್ನು ತೆರೆದಿಡುತ್ತದೆ. ಇದು ದೇಶದ ಭದ್ರತೆಗೆ ಧಕ್ಕೆ ಉಂಟು ಮಾಡಲಿದೆ.
ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಈ ಮಹತ್ವದ ದಾಖಲೆಗಳು ಸೋರಿಕೆಯಾಗಿರುವುದು ಅತ್ಯಂತ ಖೇಧದ ವಿಚಾರ. ಈ ದಾಖಲೆಗಳನ್ನು ಸೋರಿಕೆ ಮಾಡಿರಬಹುದಾದ ಅಧಿಕಾರಿ ಹಾಗೂ ಪ್ಯಾನಲ್’ಗಳ ವಿರುದ್ದ ಸರ್ಕಾರ ಕ್ರಮಕೈಗೊಳ್ಳಲಿದೆ. ದಾಖಲೆ ಸೋರಿಕೆ ವಿಚಾರವನ್ನು ಸಮಗ್ರ ಆಂತರಿಕ ತನಿಖೆ ನಡೆಸಲು ಫೆ.28ರಂದೇ ಕೇಂದ್ರ ಆದೇಶಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.
Discussion about this post