ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದ ಮಧ್ಯಮ ವರ್ಗದ ತೆರಿಗೆದಾರರಿಗೆ #IncomeTax ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಿಗ್ ಗುಡ್ ನ್ಯೂಸ್ ಕೊಟ್ಟಿದೆ.
2025-26ರ ಸಾಲಿನ ಬಜೆಟ್ ಮಂಡನೆ ಮಾಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, 12 ಲಕ್ಷದವರೆಗೂ ಆದಾಯ ತೆರಿಗೆ ಪಾವತಿ ಮಾಡುವ ಅವಶ್ಯತೆಯಿಲ್ಲ ಎಂದು ಹೇಳುವ ಮೂಲಕ ಐತಿಹಾಸಿಕ ಘೋಷಣೆ ಮಾಡಿ, ದಾಖಲೆ ಬರೆದಿದ್ದಾರೆ.
Also Read>> ದೇಶದ ಸರ್ಕಾರಿ ಪ್ರೌಢಶಾಲೆಗೆ ಬಿಗ್ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ
ತಿಂಗಳಿಗೆ ಒಂದು ಲಕ್ಷ ಅಂದರೆ ವರ್ಷಕ್ಕೆ 12 ಲಕ್ಷ ರೂಪಾಯಿವರೆಗೂ ಆದಾಯ ಗಳಿಸುವವರು ತೆರಿಗೆ ಪಾವತಿಸುವ ಅವಶ್ಯಕತೆಯಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಇದರಿಂದಾಗಿ 80 ಸಾವಿರದವರೆಗೂ ವಾರ್ಷಿಕ ಉಳಿತಾಯವನ್ನು ಜನರು ಪಡೆಯಬಹುದಾಗಿದೆ.
ಲೆಕ್ಕಾಚಾರ ಹೀಗಿದೆ?
- 0-4 ಲಕ್ಷ: 0% ತೆರಿಗೆ
- 4-8 ಲಕ್ಷ: 5% ತೆರಿಗೆ
- 8-12 ಲಕ್ಷ: 10% ತೆರಿಗೆ
- 12-16 ಲಕ್ಷ: 15% ತೆರಿಗೆ
- 16-20 ಲಕ್ಷ: 20% ತೆರಿಗೆ
- 20-24 ಲಕ್ಷ: 25% ತೆರಿಗೆ
- 24 ಲಕ್ಷಕ್ಕೂ ಅಧಿಕ: 30% ತೆರಿಗೆ
ಪ್ರತಿ ಬಾರಿ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ಹೆಚ್ಚಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿತ್ತು. ಹೀಗಾಗಿ ಈ ಬಾರಿ ಗರಿಷ್ಠ 10 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ನೀಡಬಹುದು ಎಂಬ ಮಾತು ಕೇಳಿ ಬಂದಿತ್ತು. ಆದರೆ ಈ ಬಾರಿ ನಿರ್ಮಲಾ ಸೀತಾರಾಮನ್ ಅವರು ಬರೋಬ್ಬರಿ 12 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಿ ಮಧ್ಯಮ ವರ್ಗದವರಿಗೆ ಬಂಪರ್ ಘೋಷಣೆ ಮಾಡಿದ್ದಾರೆ.
ಮುಂದಿನ ವಾರ ಸರ್ಕಾರ ಹೊಸ ಆದಾಯ ತೆರಿಗೆ ಮಸೂದೆಯನ್ನು ಪರಿಚಯಿಸಲಾಗುವುದು. ತೆರಿಗೆಯು ವಿಕಸಿತ ಭಾರತಕ್ಕೆ ಪ್ರಮುಖ ಸುಧಾರಣೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ವೈಯಕ್ತಿಕ ಆದಾಯ ತೆರಿಗೆ ಸುಧಾರಣೆಗಳು ಮಧ್ಯಮ ವರ್ಗದವರ ಹೊರೆಯನ್ನು ಕಡಿಮೆ ಮಾಡುವತ್ತ ವಿಶೇಷ ಗಮನ ಹರಿಸುತ್ತವೆ ಎಂದು ಅವರು ಹೇಳಿದರು. ಹೊಸ ಆದಾಯ ತೆರಿಗೆ ಮಸೂದೆಯು ಕಾನೂನುಗಳನ್ನು ಸರಳಗೊಳಿಸುತ್ತದೆ, ಪ್ರಸ್ತುತ ಕಾನೂನುಗಳಲ್ಲಿ ಅರ್ಧದಷ್ಟು ಉಳಿಸಿಕೊಳ್ಳುತ್ತದೆ, ಸ್ಪಷ್ಟ ಮತ್ತು ನೇರವಾಗಿರುತ್ತದೆ ಮತ್ತು ತೆರಿಗೆದಾರರಿಗೆ ಸಂಕೀರ್ಣತೆಯನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post