ಹೊಸನಗರ: ಅಬ್ಬಿ ಫಾಲ್ಸ್’ನಲ್ಲಿ ಕಾಲುಜಾರಿ ಬಿದ್ದು ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗರನ್ನು ಸಿನಿಮಿಯ ರೀತಿಯಲ್ಲಿ ರಕ್ಷಣೆ ಮಾಡಿರುವ ಘಟನೆ ಇಂದು ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿರುವ ಅಬ್ಬಿ ಜಲಪಾತ ವೀಕ್ಷಿಸಲು ಐವರು ಯುವಕರು ತೆರಳಿದ್ದರು. ಈ ವೇಳೆ ಕಾಲುಜಾರಿದ ಪರಿಣಾಮ ಸುಮಾರು 20 ಅಡಿ ಆಳಕ್ಕೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರು.
ಈ ವಿಷಯ ತಿಳಿದಾಕ್ಷಣ ಯಡೂರು ಗ್ರಾಮದ ಯುವಕರು ತತಕ್ಷಣ ಸಿನಿಮಿಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ, ಹಗ್ಗ ಬಳಸಿ ಪ್ರವಾಸಿ ಯುವಕರನ್ನು ರಕ್ಷಿಸಿದ್ದಾರೆ.
ಕಲ್ಲು ಬಂಡೆಯ ನಡುವೆ ಕೊಚ್ಚಿ ಹೋದ ಕಾರಣ ಪ್ರವಾಸಿಗನಿಗೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು, ಕೂದಲೆಳೆ ಅಂತರದಲ್ಲಿ ದೊಡ್ಡ ಅಪಾಯ ತಪ್ಪಿದೆ.
(ಮಾಹಿತಿ: ಮಹೇಶ್ ಹಿಂಡ್ಲಮನೆ)
Discussion about this post