ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಜೈಲ್ ರಸ್ತೆಯ ಇಡ್ಲಿ ಹೌಸ್ ಪಕ್ಕದ ತಿರುವಿನ ವೆಂಕಟೇಶ ನಗರ ತಿರುವಿನ ಆರಂಭದ ಮನೆಯೊಂದರ ಮುಂದೆ ಇಂದು ಮುಂಜಾನೆ ಯುವಕನೋರ್ವನನ್ನು ಕೊಲೆ ಮಾಡಲಾಗಿದೆ.
ಮೃತ ವ್ಯಕ್ತಿಯನ್ನು ಗಾಂಧಿನಗರದ ನಿವಾಸಿ ಹಾಗೂ ಶಿವಮೊಗ್ಗ ನಗರದ ಭಾರತ್ ನ್ಯೂರೋ ಕ್ಲಿನಿಕ್’ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂ.ವಿ. ವಿಜಯ್ ಎಂದು ಹೇಳಲಾಗುತ್ತಿದೆ.


ಸ್ಥಳಕ್ಕೆ ಭೇಟಿ ನೀಡಿದ ಜಯನಗರ ಪೊಲೀಸ್ ಠಾಣೆಯ ಇನ್ಸೆö್ಪಕ್ಟರ್ ಮಾದಪ್ಪ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದು, ಮೃತ ವ್ಯಕ್ತಿಯ ದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ.










Discussion about this post