ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಈ ಅವಧಿಯ ಕೊನೆಯ ಬಜೆಟನ್ನು ಇಂದು ಮಂಡಿಸಲಾಗಿದ್ದು, ಮನೆ ಖರೀದಿ ಮಾಡುವವರಿಗೆ ತೆರಿಗೆ ಹೊರೆಯನ್ನು ಕಡಿಮೆ ಮಾಡುವ ನಿರ್ಧಾರ ಮಾಡಿದೆ.
ಬಜೆಟ್ ಮಂಡಿಸಿ ಮಾತನಾಡಿದ ಹಂಗಾಮಿ ವಿತ್ತ ಸಚಿವ ಪೀಯೂಷ್ ಗೋಯಲ್, ಈ ಬಗ್ಗೆ ಜಿಎಸ್‌ಟಿ ಮಂಡಳಿ ಚರ್ಚಿಸಿ ಕ್ರಮ ಕೈಗೊಳ್ಳಲಿ ಎಂದಿದ್ದಾರೆ.
ಸಾಮಾನ್ಯ ಜನರ ನಿತ್ಯ ಬಳಕೆಯ ವಸ್ತುಗಳ ಮೇಲಿನ ತೆರಿಗೆಯನ್ನು ಜಿಎಸ್‌ಟಿಯಡಿ ಈಗಾಗಲೇ ಅಗ್ಗಗೊಳಿಸಿದ್ದು ಶೇ. 0-5ರ ಸ್ಲಾಬ್‌ನಲ್ಲಿ ಇಡಲಾಗಿದೆ. ನಮ್ಮ ಸರ್ಕಾರ ಅನುಷ್ಠಾನಕ್ಕೆ ತಂದ ಜಿಎಸ್‌ಟಿ ದೇಶದ ಸ್ವಾತಂತ್ರ‍್ಯ ನಂತರದ ಅತಿದೊಡ್ಡ ಸುಧಾರಿತ ತೆರಿಗೆ ವ್ಯವಸ್ಥೆ ಎಂಬುದರಲ್ಲಿ ಅನುಮಾನವಿಲ್ಲ. ಜಿಎಸ್‌ಟಿಯಿಂದಾಗಿ ಪ್ರತಿ ತಿಂಗಳಿಗೆ ಸುಮಾರು 97,000 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗುತ್ತಿದೆ ಎಂದರು.
Discussion about this post